'ಭಾವಿ ಪ್ರಧಾನಿ' ಯಾತ್ರೆ: ಆರ್ಎಸ್ಎಸ್ ಗೆ ಸುತರಾಂ ಇಷ್ಟವಿಲ್ಲ
ಹೊಸದಿಲ್ಲಿ,
ಸೆ. 18: ಮುಂಬರುವ ಸಾರ್ವತ್ರಿಕ ಚುನಾವಣೆ ವೇಳೆ ಪ್ರಧಾನಿ ಪಟ್ಟದಿಂದ ದೂರವಾದರೆ ಮಾತ್ರ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರ ಭ್ರಷ್ಟಾಚಾರದ ವಿರುದ್ಧ ಮತ್ತೊಂದು ರಥಯಾತ್ರೆಗೆ ಬೆಂಬಲ ನೀಡಲು ಆರ್ಎಸ್ಎಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. id="toptextpromo">ಭ್ರಷ್ಟಾಚಾರ
ವಿರುದ್ಧ ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಭಾವಿ ಪ್ರಧಾನಿ ಎಂದು ಬಿಂಬಿಸಿಕೊಂಡು ಅವರು ಯಾತ್ರೆಯಲ್ಲಿ ಹೆಜ್ಜೆ ಹಾಕುವಂತಿಲ್ಲ. ಮುಖ್ಯ ಸಂಗತಿಯೆಂದರೆ, ಯಾತ್ರೆ ಕೈಗೊಳ್ಳುವ ಮುನ್ನ ಅವರು ಪ್ರಸ್ತಾವನೆಯನ್ನು ಆರ್ಎಸ್ಎಸ್ ಮುಂದಿಟ್ಟಿಲ್ಲ. ಸಂಘಟನೆಗೆ ಇದರಿಂದ ಇರಿಸುಮುರಿಸು ಉಂಟಾಗಿದೆ ಎಂಬ ಮಾತು ಆರ್ಎಸ್ಎಸ್ ವಲಯದಲ್ಲಿ ಕೇಳಿಬಂದಿದೆ. id='are-slot-1' class='oiad oi-axt oiadv'> id='top-searched-articles'>ಇದೇ
ವೇಳೆ, ತಾವು ಪ್ರಧಾನಿ ಅಭ್ಯರ್ಥಿಯ ಅಲ್ಲ ಎಂದು ಆಡ್ವಾಣಿ ಅವರು ಬಹಿರಂಗವಾಗಿ ಘೋಷಿಸಿದರೆ ಮಾತ್ರ ಬೆಂಬಲ ನೀಡುವುದಾಗಿ ಆರ್ಎಸ್ಎಸ್ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಸೋಜಿಗದ ಸಂಗತಿಯೆಂದರೆ ಸ್ವತಃ ಬಿಜೆಪಿ ಆಗಲಿ ಅಥವಾ ಆರ್ಎಸ್ಎಸ್ ಆಗಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ಸದ್ಯಕ್ಕೆ ಆಲೋಚಿಸಿಲ್ಲ.











Click it and Unblock the Notifications