ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗ್ಡೆಯವರನ್ನು ಭೇಟಿಯಾಗಲಿದ್ದಾರಂತೆ ಶ್ರೀರಾಮುಲು!

By Prasad
|
Google Oneindia Kannada News

Sriramulu likely to meet Santosh Hegde
ಬೆಂಗಳೂರು, ಸೆ. 17 : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಬಳ್ಳಾರಿಯಲ್ಲಿ ತನಿಖೆಯನ್ನು ತೀವ್ರಗೊಳಿಸಿರುವ ಹಂತದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿರುವ ಮಾಜಿ ಸಚಿವ ಬಿ ಶ್ರೀರಾಮುಲು ಅವರು ಸದ್ಯದಲ್ಲಿಯೇ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರನ್ನು ಭೇಟಿಯಾಗಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸಂತೋಷ್ ಹೆಗ್ಡೆ ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಹೆಸರಿಸಲಾಗಿರುವ ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ. ಜಿ ಕರುಣಾಕರ ರೆಡ್ಡಿಯನ್ನು ಸಿಬಿಐ ಸತತವಾಗಿ ವಿಚಾರಣೆ ನಡೆಸುತ್ತಿದೆ. ಬಂಧನದ ಹೆದರಿಕೆಯಲ್ಲಿಯೇ ಓಡಾಡುತ್ತಿರುವ ಶ್ರೀರಾಮುಲು ತಮಗಿನ್ನೂ ಸಿಬಿಐನಿಂದ ನೋಟೀಸ್ ಬಂದೇ ಇಲ್ಲ ಎಂದು ಹೇಳುತ್ತಿದ್ದಾರೆ.

ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಚಂಚಲಗುಡ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಕಾಲ ದೂಡುತ್ತಿರುವ ಜನಾರ್ದನ ರೆಡ್ಡಿ ಅವರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಶ್ರೀರಾಮುಲು ಆಗ್ರಹಿಸಿದ್ದಾರೆ. ರೆಡ್ಡಿಯನ್ನು ಸಾಮಾನ್ಯ ಕೈದಿಯಂತೆ ಕಾಣಬಾರದೆಂದು ಮನವಿ ಮಾಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ಕಂಗೆಟ್ಟಿರುವ ಶ್ರೀರಾಮುಲು ನೇರವಾಗಿ ಸಂತೋಷ್ ಹೆಗ್ಡೆಯವರನ್ನೇ ನೇರವಾಗಿ ಭೇಟಿಯಾಗಿ, 'ನಾನೇನು ತಪ್ಪು ಮಾಡಿದ್ದೇನೆಂದು ನನ್ನ ಹೆಸರು ವರದಿಯಲ್ಲಿ ಸೇರಿಸಿರುವಿರಿ' ಎಂದು ಕೇಳಲಿದ್ದಾರೆ ಎಂದು ತಿಳಿದುಬಂದಿದೆ. ಸಂತೋಷ್ ಹೆಗ್ಡೆಯವರು ಇದಕ್ಕೆ ಅವಕಾಶ ನೀಡುವರೆ?

English summary
Ex-minister B Sriramulu is likely to meet Ex-Lokayukta Justice Santosh Hegde to know why his name was included in illegal mining report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X