ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗದು ವಶ : ರೆಡ್ಡಿಯನ್ನು ಬಳ್ಳಾರಿಗೆ ಎಳೆತಂದ ಸಿಬಿಐ

By * ರೋಹಿಣಿ ಬಳ್ಳಾರಿ
|
Google Oneindia Kannada News

CBI bring Srinivas Reddy to Bellary
ಬಳ್ಳಾರಿ, ಸೆ.17 : ಗುಂತಕಲ್ಲಿನಲ್ಲಿ ಭಾರೀ ಹಣ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಿಬಿಐ ಕಸ್ಟಡಿಯಲ್ಲಿ ಇರುವ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿಯನ್ನು ಹೆಚ್ಚಿನ ತನಿಖೆಗಾಗಿ ಮತ್ತು ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಶುಕ್ರವಾರ ನಸುಕಿನ 2 ಗಂಟೆಗೆ ಬಳ್ಳಾರಿಗೆ ಕರೆತಂದ ಅಧಿಕಾರಿಗಳು, ಪರಮದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಇರಿಸಿ ಬೆಳಿಗ್ಗೆ ಬ್ಯಾಂಕ್‌ಗಳಿಗೆ ಕರೆದೊಯ್ದಿದ್ದಾರೆ.

ಸಿಬಿಐನ ಇಬ್ಬರು ಪೊಲೀಸರ ಭದ್ರತೆಯಲ್ಲಿ ಪರಮದೇವನಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ ಶ್ರೀನಿವಾಸ ರೆಡ್ಡಿಯನ್ನು ಸೆಪ್ಟೆಂಬರ್ 5ರಂದು ಸಿಬಿಐ ಅಧಿಕಾರಿಗಳು ಬಳ್ಳಾರಿಯಲ್ಲಿ ಅವರ ಮನೆಯಲ್ಲಿ ಬಂಧಿಸಿದ್ದರು. ಗುಂತಕಲ್ಲುನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ಕೋಟ್ಯಾಂತರ ರೂಪಾಯಿ ಹಣ ಶ್ರೀನಿವಾಸ ರೆಡ್ಡಿಗೆ ಸೇರಿದ್ದು ಎಂಬ ಖಚಿತ ಮಾಹಿತಿಯ ಮೇರೆಗೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಸೋಮಯ್ಯ ಎಂಬ ಅಧಿಕಾರಿಗಳ ನೇತೃತ್ವದ ಐವರು ಸಿಬಿಐ ಅಧಿಕಾರಿಗಳ ತಂಡ ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ವಿಚಾರಣೆ ನಡೆಸಿ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದೆ. ವಶಪಡಿಸಿಕೊಳ್ಳಲಾಗಿದ್ದ 4 ಕೋಟಿ 85 ಲಕ್ಷ ರು. ಬಳ್ಳಾರಿಯಿಂದ ಶ್ರೀನಿವಾಸ ರೆಡ್ಡಿ ಹೆಂಡತಿ ಇದ್ದ ಕಡಪಕ್ಕೆ ಹೋಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಮತ್ತು ಜನಾರ್ದನ ರೆಡ್ಡಿಗೆ ಸೇರಿದ ಎಲ್ಲಾ ಬ್ಯಾಂಕ್‌ಗಳ ಖಾತೆಗಳು, ಲಾಕರ್‌ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

English summary
CBI sleuths have brought Srinivas Reddy to Bellary in connection with Rs 4.85 cr seized by plice near Guntakal. CBI officials checking bank accounts, lockers belonging to Srinivas Reddy and Janardhana Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X