ರೆಡ್ಡಿ ದುರ್ದೆಸೆ: ಸಿಬಿಐಗೆ ವರವಾಗಲಿದೆ ಹವಾಲಾ ಕೊಪ್ಪರಿಗೆ

guntakal-police-intercept-lorry-seize-5-crore-reddy
ಹೈದರಾಬಾದ್, ಸೆ.16: ಬಳ್ಳಾರಿಯಿಂದ ಆಂಧ್ರದತ್ತ ಲಾರಿ ಮೂಲಕ ಸಾಗಿಸಲಾಗುತ್ತಿದ್ದ ರೂ 4.95 ಕೋಟಿ ನಗದನ್ನು ಗುಂತಕಲ್ ಪೊಲೀಸರು ಗುರುವಾರ ಸಂಜೆ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಇದು (ಅಕ್ರಮ) ಗಣಿವೀರ ಜನಾರ್ದನ ರೆಡ್ಡಿಗೆ ಸಿಬಿಐ ಕುಣಿಕೆ ಬಿಗಿಗೊಳಿಸಲು ತನಿಖಾಧಿಕಾರಿ ವಿ.ವಿ. ಲಕ್ಷ್ಮಿನಾರಾಯಣಗೆ ವರವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಲಕ್ಷ್ಮಿನಾರಾಯಣಗೆ ಇದು ಬಯಸದೇ ಬಂದ ಭಾಗ್ಯ! ಒಂದು ರೀತಿಯಲ್ಲಿ ರೆಡ್ಡಿ ಸ್ವತಃ ತೋಡಿಕೊಂಡ ಖೆಡ್ಡಾ ಇದಾಗಲಿದೆ.

ಗುಂತಕಲ್‌ನ ಹನುಮಾನ್ ವೃತ್ತದಲ್ಲಿ ಲಾರಿಯ ತಪಾಸಣೆ ನಡೆಸಿದ ಸಂದರ್ಭ ಗೋಣಿ ಚೀಲದಲ್ಲಿ ಇರಿಸಲಾಗಿದ್ದ ಅಪಾರ ಪ್ರಮಾಣದ ನಗದು ಇರುವುದು ಬೆಳಕಿಗೆ ಬಂದಿದೆ. ಬಳ್ಳಾರಿಯಲ್ಲಿ ಈ ಹಣವನ್ನು ಯಾರಿಂದ ಪಡೆದು, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಲ್ಲದೆ, ಬಂಧಿತರಲ್ಲಿ ಒಬ್ಬರಾಗಿರುವ ವೆಂಕಟರಾಮರೆಡ್ಡಿ ಅವರು ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಅವರ ಆಪ್ತರಾಗಿದ್ದಾರೆ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಇತ್ತೀಚೆಗಷ್ಟೇ ನಗರದಲ್ಲಿ ಬುಡಾ ಅಧ್ಯಕ್ಷ ಗುರುಲಿಂಗನಗೌಡ ಹಾಗೂ ಜನಾರ್ದನರೆಡ್ಡಿ ಸಂಬಂಧಿ ಭಾಸ್ಕರರೆಡ್ಡಿ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಸಿಬಿಐ ಸಿಬ್ಬಂದಿ, ವೆಂಕಟರಾಮರೆಡ್ಡಿ ಅವರ ಮನೆಯ ಮೇಲೂ ದಾಳಿ ನಡೆಸುವ ಯೋಜನೆ ಹಾಕಿಕೊಂಡಿದ್ದರು.

ಪೊಲೀಸರು ವಶಪಡಿಸಿಕೊಂಡಿರುವ ಲಾರಿಯು ಆಂಧ್ರದ ಕಡಪ ಜಿಲ್ಲೆಯ ಪೊದ್ದಟೂರು ಪಟ್ಟಣದ್ದಾಗಿದ್ದು, ಅಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರ ಹತ್ತಿರದ ಸಂಬಂಧಿಗಳಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಸಿಬಿಐ ತಂಡವೊಂದು ಗುಂತಕಲ್‌ಗೆ ಗುರುವಾರ ರಾತ್ರಿ ಆಗವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+