ವಿದ್ಯಾರ್ಥಿಗಳ ನೆಮ್ಮದಿ ಹಾಳುಗೆಡವಿದ ನೆಮ್ಮದಿ ಕೇಂದ್ರ

ಯಾದಗಿರಿ ಜಿಲ್ಲೆಯ ಹೊಸಳ್ಳಿ ಕ್ರಾಸ್ ಸಮೀಪವಿರುವ ನೆಮ್ಮದಿ ಕೇಂದ್ರಕ್ಕೆ ಬಂದು ವಿದ್ಯಾರ್ಥಿಗಳು ಬಂದು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕೆಂದರೆ ಮಕ್ಕಳ ದಿನಗಟ್ಟಲೆ ಕಾಯಬೇಕಾಗಿದೆ. ಇದರಿಂದ ಮಕ್ಕಳು ಮತ್ತು ಪಾಲಕರ ನೆಮ್ಮದಿ ಹಾಳಾಗಿದೆ.
ಮಕ್ಕಳು ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೂ ಯಾದಗಿರಿಯ ಬಿರುಬಿಸಿಲು ತಾಳಲಾರದೆ ಮಕ್ಕಳು ವಾಂತಿಯನ್ನು ಮಾಡಿಕೊಳುತ್ತಿದ್ದಾರೆ. ಕೆಲವರು ಪುಸ್ತಕಗಳನ್ನು ತಲೆಯ ಮೇಲಿಟ್ಟು ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದರು. ಇನ್ನು ಕೆಲವರು ಸರದಿಯಲ್ಲಿ ನಿಲ್ಲಲಾಗದೇ ನೆರಳಿನಲ್ಲಿ ಕುಳಿತಿದ್ದರು. ನೆಮ್ಮದಿ ಕೇಂದ್ರದಲ್ಲಿ ಒಂದೇ ಕಂಪ್ಯೂಟರ್ ಇದಿದ್ದರಿಂದ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಅಂತಾರೆ ವಿದ್ಯಾರ್ಥಿಗಳು ಮತ್ತು ಪಾಲಕರು.
ನೆಮ್ಮದಿ ಕೇಂದ್ರದ ಅವ್ಯವಸ್ಥೆಯನ್ನು ಕಂಡು ಯಾದಗಿರಿ ತಹಶೀಲ್ದಾರ್ ನಫೀಸಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯಾದಗಿರಿ ತಾಲೂಕಿನಲ್ಲಿ ಒಟ್ಟು 7 ಹೋಬಳಿ ಕೇಂದ್ರಗಳಿದ್ದು, ಒಂದೊಂದು ಹೋಬಳಿಯ ನೆಮ್ಮದಿ ಕೇಂದ್ರಗಳಿಗೆ ಸುಮಾರು 45 ಹಳ್ಳಿಗಳು ಬರುತ್ತವೆ. ಇಲ್ಲಿಯೂ ಕೂಡ ಸಾಕಷ್ಟು ಗ್ರಾಮದ ಶಾಲೆಗಳ ಮಕ್ಕಳು ಬಂದಿದ್ದು, ಅವರಿಗೆ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಕೊಡಲು ತಡವಾಗುತ್ತಿದೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಮಕ್ಕಳ ಜೊತೆ ನೆಮ್ಮದಿ ಕೇಂದ್ರಕ್ಕೆ ಬಂದ ಪಾಲಕರು ಬಿಸಿಲಿನಲ್ಲಿ ಕಾಲ ಕಳೆಯುವಂತಾಗಿದೆ. ಜಾತಿಯ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಲು 2 ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಬಂದಿದೆ. ತಹಶೀಲ್ದಾರ ಮೇಡಂನವರು ಈ ಸಮಸ್ಯೆ ಬಗೆಹರಿಸುವರೆ?












Click it and Unblock the Notifications