ಯಾತ್ರೆ ಬಿಟ್ಟು ಮೊದಲು ಲೋಕಾಯುಕ್ತ ನೇಮಿಸಿ ಅಣ್ಣಾ
ರಾಲೇಗಣ್
ಸಿದ್ಧಿ, ಸೆ.14: ಭ್ರಷ್ಟಾಚಾರ ವಿರುದ್ಧ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ನಡೆಸಲು ಉದ್ದೇಶಿಸಿದ ರಥಯಾತ್ರೆ ಒಂದು ಗಿಮ್ಮಿಕ್ ಎಂದು ಬಣ್ಣಿಸಿದ ಅಣ್ಣಾ ಹಜಾರೆ, ಸಂಸತ್ತಿನಲ್ಲಿ ಜನಲೋಕಪಾಲ ಮಸೂದೆಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸದ ಮತ್ತು ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಾತಿಗೆ ಶಾಸನ ರೂಪಿಸದ ಹೊರತು ತಾನು ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. id="toptextpromo">ಪ್ರಬಲ
ಲೋಕಪಾಲ ಮಸೂದೆಗಾಗಿ ಹೊಸದಿಲ್ಲಿಯಲ್ಲಿ ಕಳೆದ ತಿಂಗಳು 12 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದ ಹಜಾರೆ ಕಾಂಗ್ರೆಸ್ ಪಕ್ಷ ಮತ್ತು ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಕಾಂಗ್ರೆಸ್‌ನಲ್ಲಿರುವ ಅನೇಕ ಮಂದಿ ತಾವೇ ಪ್ರಧಾನ ಮಂತ್ರಿ ಎಂಬುದಾಗಿ ತಿಳಿದುಕೊಂಡಿದ್ದಾರೆ ಎಂದರು. id='are-slot-1' class='oiad oi-axt oiadv'> id='top-searched-articles'>ಆಡ್ವಾಣಿ
ಅವರು ಭ್ರಷ್ಟಾಚಾರ ವಿಷಯದಲ್ಲಿ ಗಂಭೀರವಾಗಿದ್ದರೆ, ರಥಯಾತ್ರೆ ನಡೆಸುವ ಬದಲಿಗೆ ಲೋಕಾಯುಕ್ತರ ನೇಮಕಾತಿಗೆ ಶಾಸನ ರೂಪಿಸಲು ಬಿಜೆಪಿ ಆಳ್ವಿಕೆಯ ರಾಜ್ಯಗಳಿಗೆ ಹೇಳಬೇಕು. ಅವರ ರಥ ಯಾತ್ರೆ ಒಂದು ಗಿಮ್ಮಿಕ್ ಎಂದು ಹಜಾರೆ ಟಿವಿ ಚಾನೆಲ್‌ಗಳಿಗೆ ಹೇಳಿದರು.











Click it and Unblock the Notifications