ಸಿಬಿಐ ವಶಕ್ಕೆ ಬಿದ್ದ ಜನಾ ರೆಡ್ಡಿ ವಾದ ತಪ್ಪಿದ್ದೆಲ್ಲಿ?

G Janardhan reddy sent to CBI custody
ಹೈದರಾಬಾದ್, ಸೆ. 13: ಅಕ್ರಮ ಗಣಿಗಾರಿಕೆ, ಅರಣ್ಯ ನಾಶ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಓಎಂಸಿ ಎಂಡಿ ಶ್ರೀನಿವಾಸ್ ರೆಡ್ಡಿ ಅವರನ್ನು ಸೆ.19ರ ವರೆಗೆ ಸಿಬಿಐ ವಶಕ್ಕೆ ನ್ಯಾಯಮೂರ್ತಿ ನಾಗಮಾರುತಿ ಶರ್ಮಾ ಆದೇಶ ನೀಡಿದ್ದಾರೆ.

ಆದರೆ, ರೆಡ್ಡಿಗಳಿಗೆ ಜಾಮೀನು ನಿರಾಕರಿಸಲು ಕಾರಣವೇನು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಓಎಂಸಿ ಒಡೆಯ ಗಾಲಿ ಜನಾರ್ದನ ರೆಡ್ಡಿ ಹಾಗೂ ಎಂಡಿ ಶ್ರೀನಿವಾಸ ರೆಡ್ಡಿ ತಲೆ ಮೇಲೆ ಕೆಳಕಂಡ ಆರೋಪಗಳಿವೆ.

* ಭಾರತೀಯ ದಂಡ ಸಂಹಿತೆ ಕಲಂ 120b 420, 379, 411, 427
* 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(2) 13(1)ಡಿ
* 112 ಕಬ್ಬಿಣ ಅದಿರುಗಳ ಸ್ಯಾಂಪಲ್ ಸಂಗ್ರಹ ಪರಿಶೀಲನೆ
* 1530 ದಾಖಲೆಗಳ ಸಂಗ್ರಹ
* 85 ಸಾಕ್ಷಿಗಳ ವಿಚಾರಣೆ
* 1926ರ ಭಾರತೀಯ ಅರಣ್ಯ ಕಾಯ್ದೆ ಸೆಕ್ಷನ್ 26 ಉಲ್ಲಂಘನೆ
* ಅದಿರು ಕಾಯ್ದೆ ಕಲಂ 4(1), 23

ಜನಾರ್ದನ ರೆಡ್ಡಿ ಪರವಾಗಿ ಸತತವಾಗಿ ಮೂರು ದಿನಗಳ ಕಾಲ ಖ್ಯಾತ ವಕೀಲರಾದ ಉದಯ್ ಲಲಿತ್ ಹಾಗೂ ಸಿವಿ ನಾಗೇಶ್ ವಾದ ಮಂಡಿಸಿದರೂ ಫಲ ದೊರೆಯಲಿಲ್ಲ.

ಸಿಬಿಐ ಪರ ವಕೀಲ ಟಂಕಾ ಮಂಡಿಸಿದ ವಾದದಲ್ಲಿ ಕ್ರಿಮಿನಲ್ ಸಂಚು ಆರೋಪ ಬಲವಾಗಿ ನ್ಯಾಯಾಧೀಶರಿಗೆ ತಟ್ಟಿತು. ಕೊನೆಗೆ ಬೇರೆ ಎಲ್ಲಾ ಆರೋಪಗಳಿಗಿಂತ ಸಂಚು ರೂಪಿಸಿದ ಆರೋಪ ಸ್ಥಿರವಾಗಿ ರೆಡ್ಡಿಗಳಿಗೆ ಮುಳುವಾಯಿತು.

ಪ್ರಭಾವಿ ಆರೋಪಿ ಜನಾರ್ದನ ರೆಡ್ಡಿಗೆ ಸಾಕ್ಷ್ಯ ನಾಶಪಡಿಸುವ ಅಥವಾ ಬೆದರಿಕೆ ಒಡ್ಡುವ ಸಾಧ್ಯತೆ ಇರುವುದರಿಂದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಸಿಬಿಐಗೆ ವಹಿಸಲು ಕೋರ್ಟ್ ಒಪ್ಪಿಗೆ ಸೂಚಿಸಿತು.

ಈ ಮುಂಚೆ ರೆಡ್ಡಿ ಬಂಧನದ ಸಮಯದಲ್ಲಿ ಕಾನೂನು ಉಲ್ಲಂಘಿಸಲಾಗಿದೆ. ಸಿಆರ್ ಪಿಸಿ ನಿಯಮಗಳನ್ನು ಅನುಸರಿಸಿಲ್ಲ ಎಂದು ರೆಡ್ಡಿ ಪರ 11 ಜನ ವಕೀಲರು ವಾದ ಮಂಡಿಸಿದ್ದರೂ ಫಲ ಕಂಡಿರಲಿಲ್ಲ. ಈಗ ಸಿಬಿಐ ಕೋರ್ಟ್ ಆದೇಶದ ವಿರುದ್ಧ ಆಂಧ್ರ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಮೇಲ್ಮನವಿಯನ್ನು ರೆಡ್ಡಿ ಪರ ವಕೀಲರು ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+