ಲವರ್ ನ ಕೊಚ್ಚಿ, ಕೊಂದು ಅರೆಸ್ಟ್ ಮೀ ಎಂದ ಪ್ರಿಯಕರ

ನಂಜನಗೂಡಿನ ಕನೇನೂರು ಗ್ರಾಮ, ಮೈಸೂರಿನಿಂದ ಅಷ್ಟೇನು ದೂರವಿಲ್ಲ. ನಾಗರೀಕತೆಯ ಗಂಧ ಗಾಳಿ ಇಲ್ಲಿಗೂ ತಟ್ಟಿದೆ. ಪ್ರೀತಿ ಪ್ರೇಮದ ವಿಷಯದಲ್ಲಿ ಹಳ್ಳಿಯಾದರೇನು, ದಿಲ್ಲಿಯಾದರೇನು.
ಇಲ್ಲಿದೆ ಪ್ರೇಮ್ ಕಹಾನಿ: ಸುಮಾರು 20ರ ಹರೆಯದ ಮಹಾದೇವಮ್ಮನನ್ನು ಆತ ಹುಚ್ಚನಂತೆ ಪ್ರೀತಿಸುತ್ತಿದ್ದ. ಆದರೆ, ಆಕೆ ಅವನ ಬಗ್ಗೆ ಅಸಡ್ಡೆಯ ನೋಟ ಬೀರುತ್ತಿದ್ದಳು. ಆದರೆ, ನಮ್ಮ ಒನ್ ಸೈಡ್ ಲವರ್ ಅಲ್ಲಿಗೆ ಬಿಡಲಿಲ್ಲ.
ಆದರೂ ಒಂದಲ್ಲ ಒಂದು ದಿನ ಆಕೆಯನ್ನು ಪಡೆಯುವೆ ಎಂಬ ಹಂಬಲದಿಂದ ಆಕೆ ಹಿಂದೆ ಸುತ್ತುತ್ತಿದ್ದ. ಈ ನಡುವೆ ಮಹಾದೇವಮ್ಮ ಬೇರೊಬ್ಬ ಹುಡುಗನ ಜೊತೆ ಆಗಾಗ್ಗೆ ಮಾತನಾಡುತ್ತಾ ನಿಂತಿರುತ್ತಿದ್ದಳು. ಇದಕ್ಕೆ ಹುಚ್ಚು ಪ್ರೇಮಿ(ಹೆಸರಲ್ಲೇನಿದೆ ರಮೇಶ ಎಂದು ಇಟ್ಟುಕೊಳ್ಳಿ) ಆಕ್ಷೇಪಿಸಿದ.
ಆದರೆ, ಇದಕ್ಕೆ ಮಾಹಾದೇವಿ ಕ್ಯಾರೆ ಎನ್ನಲಿಲ್ಲ. ಪದೇ ಪದೇ ವಾರ್ನಿಂಗ್ ಕೊಟ್ರು ನನ್ ವಿಷ್ಯದಲ್ಲಿ ರಾಂಗ್ ಮಾಡ್ತಿಯಾ ಎಂದಿದ್ದೆ ಆಕೆ ಮೇಲೆ ಲಾಂಗ್ ನಿಂದ ಕೊಚ್ಚಿ ಕೊಲೆ ಗೈದಿದ್ದಾನೆ. ತನ್ನ ಪ್ರೇಮಿ ಸಾವಿನ ನಂತರ ಸೀದಾ ಸಮೀಪದ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಮೊದಮೊದಲು ಇವನು ಯಾವನೋ ಹುಚ್ಚ ಎಂದು ತಿಳಿದ ಪೊಲೀಸರು ಕ್ರಮೇಣ, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.












Click it and Unblock the Notifications