ಡಿಕೆಶಿ ಅಕ್ರಮ ಗಣಿಗಾರಿಕೆ, ವಂಚನೆ ಬಗ್ಗೆ ಮೌನವೇಕೆ?

DK Shivakumar
ಚನ್ನಪಟ್ಟಣ, ಸೆ.13: ಮಾಜಿ ಸಚಿವ, ಹಾಲಿ ಶಾಸಕ ಡಿಕೆ ಶಿವಕುಮಾರ್ ಅವರು ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಾಟದ ಮೂಲಕ ದೇಶಕ್ಕೆ ಕೋಟ್ಯಂತರ ರೂ. ವಂಚಿಸಿದ್ದಾರೆ. ಆದರೆ, ಸಿಬಿಐ ಕಣ್ಣಿಗೆ ಇನ್ನೂ ಬಿದ್ದಿಲ್ಲ ಏಕೆ ಎಂದು ತೆಂಗು ಮತ್ತು ನಾರಿನ ಮಹಾ ಮಂಡಲದ ಮಾಜಿ ಅಧ್ಯಕ್ಷ ದುಂತೂರ್ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಅದಿರು ಮಣ್ಣು ಎಂದು ಹೇಳಿ ಗುಣಮಟ್ಟದ ಅದಿರು ಮಣ್ಣು ಟನ್‌ಗೆ 250 ರುಪಾಯಿಗೆ ತಮ್ಮ ಅಧಿನದ ಸಂಸ್ಥೆಗಳಿಂದ ಖರೀದಿ ಮಾಡಿದ್ದಾರೆ.

ಪಿ.ಕೆ.ಎಲ್ ಎಂಬ ಬೇನಾಮಿ ಸಂಸ್ಥೆಯ ಮೂಲಕ ಟನ್ ಒಂದಕ್ಕೆ 1,250 ರು.ನಂತೆ ವಿದೇಶಿ ಕಂಪೆನಿಗಳಿಗೆ ರವಾನಿಸಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದರು.

ಡಿಕೆಶಿ ಅಕ್ರಮ ಕಂಪನಿಗಳು: ನಂತರ ಡಿಕೆಶಿ ಅಕ್ರಮಗಳ ಕುರಿತ ಕೆಲವು ದಾಖಲೆ ಬಿಡುಗಡೆ ಮಾಡಿದರು. ಡಿಕೆಶಿ ಹಾಗೂ ಅವರ ಸಹೋದರರ ಒಡೆತನ ಮತ್ತು ಅವರ ಪಾರ್ಟ್‌ನರ್‌ಶಿಪ್ ಇರುವ ವಿಕ್ಟರಿ ಎಕ್ಸ್‌ಪೋರ್ಟ್ಸ್, ಇಂಡಿಯನ್‌ರಾಕ್ಸ್, ವ್ಯಾಲೀಶ್, ಸುವ್ವಿ ಗ್ರಾನೈಟ್ಸ್, ಸ್ಕಂದ ಎಂಟರ್‌ಪ್ರೈಸಸ್, ಸಾಲ್ ಟ್ರೇಡಿಂಗ್ ಕಂಪೆನಿ, ನೆಟ್‌ಪ್ರಾಜೆಕ್ಟ್ ಸಲ್ಯೂಷನ್, ಎಸ್ ಪ್ರದೀಪ್ ಎಕ್ಸ್‌ಪೋರ್ಟ್ಸ್ ಎಂಬ ಕಂಪೆನಿಗಳಿಗೆ ಎಂ.ಎಂ. ಎಲ್‌ನಿಂದ ಅತೀ ಕಡಿಮೆ ದರದಲ್ಲಿ ಖರೀದಿ ಮಾಡಿ ಸರ್ಕಾರಕ್ಕೆ ರಾಜಧನವನ್ನ ಕಟ್ಟದೇ ಕೋಟ್ಯಾಂತರ ರು ವಂಚನೆ ಮಾಡಲಾಗಿದೆ.

ಎಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಅಕ್ರಮಗಣಿಗಾರಿಕೆಯ ಬಗ್ಗೆ ಚರ್ಚೆ ನಡೆದಿತ್ತು. ಆಗ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆಯವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಅಂದಿನ ಸರ್ಕಾರ ಕೇಳಿಕೊಂಡಿತ್ತು.

ಆದರೆ ಡಿ.ಕೆ.ಶಿವಕುಮಾರ್‌ ಅಕ್ರಮ ಅವ್ಯವಹಾರ ನಡೆಸಿರುವುದು ದಾಖಲೆಗಳಿದ್ದರೂ ಎಲ್ಲಿಯೂ ದೋಷಿಯನ್ನಾಗಿಸಿಲ್ಲ. ಅಲ್ಲದೆ ಲೋಕಾಯುಕ್ತ ಎರಡನೇ ವರದಿಯಲ್ಲಿ ಕಾಂಗ್ರೆಸ್ಸಿನ ಅನಿಲ್ ಲಾಡ್ ಅವರ ಹೆಸರು ಮಾತ್ರ ಸೇರಿಸಲಾಗಿದೆ.

ಜನಾರ್ದನ ರೆಡ್ಡಿ ಅವರ ಮೇಲೆ ಸಿಬಿಐ ದಾಳಿ ನಡೆಸಿದಂತೆ ಕರ್ನಾಟಕದಲ್ಲೂ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುವ ಅಗತ್ಯ ಇದೆ ಎಂದು ಶ್ರೀನಿವಾಸ್ ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+