ಸಿಬಿಐಗೆ ನೆರವಾದ ಸಂಡೂರು ನ್ಯಾಯಾಲಯದ ವಾರೆಂಟ್

ಕಾಲ ಕಾಲಕ್ಕೆ ವಾರಂಟ್ ಗಳನ್ನು ಗೌರವಿಸಿ, ನ್ಯಾಯಾಲಯಗಳಿಗೆ ಹಾಜರಾಗಿ ಪ್ರಕರಣಗಳಿಂದ ಮುಕ್ತಿ ಹೊಂದಿದ್ದರೆ ಕನಿಷ್ಠ ಜಾಮೀನು ಆದರೂ ದೊರಕುತ್ತಿತ್ತು. ಆದರೆ ಎಲ್ಲವನೂ ಧಿಕ್ಕರಿಸಿದ್ದೇ ಅವರಿಗೆ ಮುಳುವಾಗಿದೆ ಎನ್ನುತ್ತಾರೆ ತಜ್ಞ ವಕೀಲರು.
ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ (ವಿಚಾರಣಾಧೀನ ಕೈದಿ ನಂ. 697) ಜಾಮೀನಿಗೆ ಸುಗ್ಗಲಮ್ಮ ದೇವಸ್ಥಾನದ ನೆಲಸಮ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಸಂಡೂರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯೇ ಅಡ್ಡಿಯಾಗಿ ಪರಿಣಮಿಸಿದೆ.
ರೆಡ್ಡಿಗೆ ಜಾಮೀನು ನೀಡದಂತೆ ಹೈದರಾಬಾದ್ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯಲ್ಲಿ ಸುಗ್ಗಲಮ್ಮ ದೇವಸ್ಥಾನದ ನೆಲಸಮ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಪ್ರಸ್ತಾಪಿಸಲಾಗಿದೆ.
ಬಳ್ಳಾರಿ ಗ್ರಾಮೀಣ ಪೊಲೀಸರು 2006ರಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ 7 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿ ಹಾಗೂ ಅದಕ್ಕೆ ಪೂರಕವಾಗಿ ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳು, ದಾಖಲೆಗಳನ್ನು ಆಧಾರವಾಗಿಟ್ಟುಕೊಂಡೇ ರೆಡ್ಡಿಯನ್ನು ಸಿಬಿಐ ತನ್ನ ಬಲೆಗೆ ಬೀಳಿಸಿಕೊಂಡಿದೆ.












Click it and Unblock the Notifications