ಎಚ್ಡಿಕೆ ಶ್ರೀರಾಮುಲು ಭೇಟಿ : ಸಂಥಿಂಗ್ ಈಸ್ ಕುಕ್ಕಿಂಗ್!

ಅಧಿಕೃತ ಮೂಲಗಳ ಪ್ರಕಾರ, ಈ ಇಬ್ಬರು ಮುಖಂಡರ ಭೇಟಿಗೆ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಬಿ. ಶ್ರೀರಾಮುಲು ನೇತೃತ್ವದಲ್ಲಿ ಸೋಮವಾರ 18ರಿಂದ 20 ಶಾಸಕರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಬಿ. ಶ್ರೀರಾಮುಲು ಆಪ್ತರು ಮಾತನಾಡುತ್ತಿದ್ದಾರೆ.
ಈ ವಿಚಾರ ನಿಜವಾದಲ್ಲಿ ಸರ್ಕಾರ ಮತ್ತೊಮ್ಮೆ ಸಂಕಷ್ಟಕ್ಕೆ ಗುರಿಯಾಗುವುದು ಖಂಡಿತ. ಅಷ್ಟೇ ಅಲ್ಲ, ಈ ಬೆಳವಣಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ತಮ್ಮ ಆಪ್ತ ಜಿ. ಜನಾರ್ದನ ರೆಡ್ಡಿ ಆಂಧ್ರದ ಚಂಚಲಗುಡ ಜೈಲಲ್ಲಿ ಇದ್ದುಕೊಂಡೇ ಕರ್ನಾಟಕದ ರಾಜಕಾರಣಕ್ಕೆ ಹೊಸ ತಿರುವು ನೀಡಲು ಬಿ. ಶ್ರೀರಾಮುಲು ಅವರನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ರೆಡ್ಡಿಗಳನ್ನು ಬಿಜೆಪಿ ಹೈಕಮಾಂಡ್ ನಿರ್ಲಕ್ಷಿಸುತ್ತಿರುವ ಕಾರಣ ಅವರಿಗೆ ರಾಜಕೀಯದ ಆಸರೆಯೂ ಬೇಕಾಗಿದೆ.












Click it and Unblock the Notifications