ಇನ್ಸ್‌ಪೆಕ್ಟರ್ ರತ್ನಾಕರ ಶೆಟ್ಟಿ ಅಮಾನತು; ಇನ್ನೂ ನಾಪತ್ತೆ
ಬೆಂಗಳೂರು,
ಸೆ. 9: ಲೋಕಾಯುಕ್ತ ಪೊಲೀಸರು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆಂದು ಹೆದರಿ, ಕಳ್ಳನಂತೆ ಓಡಿಹೋಗಿರುವ ಅಮೃತಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ರತ್ನಾಕರ ಶೆಟ್ಟಿ ಮತ್ತು ಅವರ ಶಿಷ್ಯ, ಕಾನ್‌ಸ್ಟೆಬಲ್ ಸುಹೇಲನನ್ನು ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಗುರುವಾರ ಅಮಾನತುಗೊಳಿಸಿದ್ದಾರೆ. id="toptextpromo">ಈ
ಮಧ್ಯೆ, ಇನ್ಸ್‌ಪೆಕ್ಟರ್ ರತ್ನಾಕರ ಮತ್ತು ಸುಹೇಲ್ ಈ ಕ್ಷಣದವರೆಗೂ ಪತ್ತೆಯಾಗಿಲ್ಲ. ಬೆಂಗಳೂರು ಪೊಲೀಸರು ಮತ್ತು ಲೋಕಾಯುಕ್ತರು ಇಬ್ಬರ ಬಂಧನಕ್ಕೆ ಶೋಧ ನಡೆಸಿದ್ದಾರೆ. ಇಬ್ಬರ ಮೊಬೈಲುಗಳೂ ಸ್ವಿಚ್ ಆಫ್ ಆಗಿವೆ. ಜತೆಗೆ ರತ್ನಾಕರ ಹೊತ್ತೊಯ್ದಿರುವ ಇಲಾಖೆಯ ವಾಕಿಟಾಕಿ ಸಹ ಸ್ವಿಚ್ ಆಫ್ ಆಗಿದೆ. ಇಬ್ಬರೂ ಕರ್ತವ್ಯಕ್ಕೂ ಹಾಜರಾಗಿಲ್ಲ. id='are-slot-1' class='oiad oi-axt oiadv'> id='top-searched-articles'>'ಇಬ್ಬರನ್ನೂ
ಸಂಪರ್ಕಿಸಲು ಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಲಂಚ ಪ್ರಕರಣ ಆರೋಪ ಕೇಳಿಬಂದಿರುವುದರಿಂದ ಜತೆಗೆ ಕರ್ತವ್ಯಲೋಪ ಎಸಗಿರುವುದರಿಂದ ಇನ್ಸ್‌ಪೆಕ್ಟರ್ ರತ್ನಾಕರ ಮತ್ತು ಸುಹೇಲನನ್ನು ಅಮಾನತು ಮಾಡಲಾಗಿದೆ' ಎಂದು ಮಿರ್ಜಿ ತಿಳಿಸಿದ್ದಾರೆ.











Click it and Unblock the Notifications