ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ವಂಚನೆ: ಇನ್ಫೋಸಿಸ್ ವಿರುದ್ಧ ದೂರುಗಳ ಸರಮಾಲೆ

By Srinath
|
Google Oneindia Kannada News

visa-fraud-us-infosys-staffer-charged
ನವದೆಹಲಿ, ಸೆ. 8: ಸುವಿಖ್ಯಾತ ಇನ್ಫೋಸಿಸ್ ಕಂಪನಿಯ ವಿರುದ್ಧ ವೀಸಾ ದುರ್ಬಳಕೆ ಕುರಿತಂತೆ ಮತ್ತೊಂದು ದೂರು ದಾಖಲಾಗಿದ್ದು, ಸಂಸ್ಥೆ ತೀವ್ರ ಮುಜುಗರಕ್ಕೆ ಸಿಲುಕಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಅಚ್ಚಳಿಯದ ಹೆಸರು ಮಾಡಿರುವ ಇನ್ಫೋಸಿಸ್ ಇದರಿಂದ ಒಂದಷ್ಟು ಹಿನ್ನಡೆಯಾಗುವುದು ದಿಟ. ಅಮೆರಿಕದ ಎಚ್‌ಆರ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಇನ್ಫೋಸಿಸ್‌ನ ನೌಕರನೊಬ್ಬ ವೀಸಾ ದುರ್ಬಳಕೆ ಮಾಡಿದ ಆರೋಪ ಎದುರಾಗಿದೆ.

ಈಗಾಗಲೇ ಇಂತಹ ಎರಡು ದೂರುಗಳು ಇನ್ಫೋಸಿಸ್ ವಿರುದ್ಧ ದಾಖಲಾಗಿದ್ದವು. ಅಮೆರಿಕದಲ್ಲಿರುವ ಎಚ್‌ಆರ್ ಇಲಾಖೆಯ ನೌಕರರೊಬ್ಬರ ವಿರುದ್ಧ ಈ ದೂರು ದಾಖಲಾಗಿದೆ. ಈ ಕುರಿತು ಇನ್ನೋರ್ವ ಎಚ್‌ಆರ್ ನೌಕರ ಮತ್ತು ಇನ್ಫೋಸಿಸ್‌ನ ಅಮೆರಿಕದ ಕಾನೂನು ಸಲಹೆಗಾರ ಜೆಫ್ರಿ ಫ್ರಿಡೆಲ್‌ಗೆ ಇ-ಮೇಲ್ ಮೂಲಕ ತಿಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಅರ್ಜಿ ನಮೂನೆ 1-9ರನ್ವಯ ಪೂರೈಸಬೇಕಾದ ಆವಶ್ಯಕತೆಗಳನ್ನು ಪೂರೈಸಲಾಗಿಲ್ಲ ಎಂಬುದು ದೂರಿನ ಅಂಶವಾಗಿದೆ. ಅಮೆರಿಕದಲ್ಲಿ ಕೆಲಸ ಮಾಡುವ ನೌಕರನಿಗೆ ಕಂಪನಿಗಳ ಮಾಲೀಕರು ಅನುಮತಿ ನೀಡುವಾಗ ಇವುಗಳನ್ನು ಪೂರೈಸುವ ಆವಶ್ಯಕತೆಯಿದೆ ಎಂದು ವರದಿ ಹೇಳಿದೆ.

ಇನ್ಫೋಸಿಸ್‌ನ ಬ್ಯಾಂಕಿಂಗ್ ಮತ್ತು ಶೇರು ಮಾರುಕಟ್ಟೆಗಳ ವಿಭಾಗದಲ್ಲಿನ ನೌಕರರು ವೀಸಾ ದುರ್ಬಳಕೆ ಮಾಡುತ್ತಿರುವ ಬಗ್ಗೆ ತಿಳಿಸಲಾಗಿದೆ. ಇಂತಹ ಯತ್ನಗಳನ್ನು ತಡೆಯುವ ಆವಶ್ಯಕತೆ ಇದೆ ಎಂದು ಎಚ್‌ಆರ್ ತನ್ನ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇಂತಹ ವಿಷಯಗಳಿಗೆ ಸಂಬಂಧಿಸಿ ಇನ್ಪೋಸಿಸ್ ಆಂತರಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯೊಂದು ಹೇಳಿದೆ.

English summary
The visa issue has come to haunt Infosys Technologies again after a third complaint lodged against it by an employee surfaced on Wednesday (sept7). This time, the complaint relates to non-compliance of the Form I-9 in the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X