ಇನ್ಸ್‌ಪೆಕ್ಟರ್ ರತ್ನಾಕರ್ ಶೆಟ್ಟಿಗೆ ಮುಳುವಾಗಿರುವ ಪ್ರಕರಣ ಯಾವುದು?

ಎರಡು ದಿನ ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟು ಚಿತ್ರ ಹಿಂಸೆ ಕೊಟ್ಟಿದ್ದರು. ಬಳಿಕ 10 ಲಕ್ಷ ರೂಪಾಯಿ ಲಂಚ ನೀಡುವುದಾರೆ ಬಂಧನ ಮುಕ್ತಗೊಳಿಸುವುದಾಗಿ ಹೇಳಿದ್ದರು.
ಅದಕ್ಕೆ ಒಪ್ಪಿ ಅಹಮದ್ ಹೇಗೊ ಠಾಣೆಯಿಂದ ತಪ್ಪಿಸಿಕೊಂಡು ಬಂದು ನೇರವಾಗಿ ಲೋಕಾಯುಕ್ತರಿಗೆ ದೂರು ಕೊಟ್ಟರು. ಆಗ ಲೋಕಾಯುಕ್ತ ಅಧಿಕಾರಿಗಳು 'ಈ ರೀತಿ ದೂರು ನೀಡಿದರೆ ಪ್ರಯೋಜನವಾಗುವುದಿಲ್ಲ. ನಮಗೆ ದಾಖಲೆಗಳು ಬೇಕು' ಎಂದರು. ಅದಕ್ಕೆ ಒಪ್ಪಿಕೊಂಡ ಅಹಮದ್ ಮತ್ತೆ ಅಮೃತಹಳ್ಳಿ ಠಾಣೆಗೆ ಹೋಗಿ ಲಂಚದ ಬಗ್ಗೆ ಡೀಲ್ ಕುದುರಿಸಲು ಪ್ರಯತ್ನಿಸಿದರು.
'10 ಲಕ್ಷ ರೂ. ನೀಡಲು ಸಾಧ್ಯವಿಲ್ಲ, ಬದಲಿಗೆ 5 ಲಕ್ಷ ನೀಡಿ ಕೇಸ್ ಮುಚ್ಚಿ ಹಾಕಿ' ಅಂತ ರತ್ನಾಕರ್ ಶೆಟ್ಟಿಯನ್ನು ಒಪ್ಪಿಸಿ ಬಂದರು. ಆಗ, ರತ್ನಾಕರ್ ಶೆಟ್ಟಿ 'ನೀನು ಏನಿದ್ದರೂ ಪೇದೆ ಸೊಹಲ್ ಜತೆಗೆ ಮಾತನಾಡು. ಅವನೇ ದುಡ್ಡಿನ ವ್ಯವಹಾರ ಮಾತನಾಡುತ್ತಾನೆ' ಎಂದು ಹೇಳಿ ಕಳುಹಿಸಿದರು.












Click it and Unblock the Notifications