ಲೋಕಾಯುಕ್ತ ಖೆಡ್ಡಾದಿಂದ ಪರಾರಿಯಾದ ಇನ್ಸ್‌ಪೆಕ್ಟರ್ ರತ್ನಾಕರ

ಆದರೆ, ನೂರ್ ಅಹಮದ್ ಈ ಎಲ್ಲ ಡೀಲ್‌ಗಳನ್ನು ದಾಖಲೆಗಾಗಿ ರೆಕಾರ್ಡ್ ಮಾಡಿಕೊಂಡಿದ್ದರು. ನಂತರ ಅದನ್ನು ದಾಖಲೆಯಾಗಿ ಲೋಕಾಯುಕ್ತ ಪೊಲೀಸರಿಗೆ ನೀಡಿದರು.
ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ರತ್ನಾಕರ ಶೆಟ್ಟಿ ಮತ್ತು ಪೇದೆ ಸೊಹಲ್‌ನನ್ನು ಬಲೆಗೆ ಬೀಳಿಸಲು ಲೋಕಾಯುಕ್ತ ಪೊಲೀಸರು ತೀರ್ಮಾನಿಸಿದರು. ನೂರ್ ಅಹಮದ್ ಕೈಗೆ ಒಂದೂವರೆ ಲಕ್ಷ ರೂ. ಹಣ ನೀಡಿ, ಎಲ್ಲರೂ ಬುಧವಾರ ಅಮೃತಹಳ್ಳಿ ಪೊಲೀಸ್ ಠಾಣೆಗೆ ಹೋದರು.
ಆದರೆ, ದಾಳಿ ಬಗ್ಗೆ ಸುಳಿವು ಪಡೆದುಕೊಂಡಿದ್ದ ಇಬ್ಬರು ಭ್ರಷ್ಟ ಖಾಕಿಗಳು ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ನೂರ್ ಅಹಮದ್ ಕೊಟ್ಟಿರುವ ದಾಖಲೆಯಂತೆ ಲೋಕಾಯುಕ್ತ ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರತ್ನಾಕರ್ ಪ್ರಕರಣ ನಿಜ ಸಿಬ್ಬಂದಿ: ನೂರ್ ಅಹ್ಮದ್‌ರನ್ನು ಠಾಣೆಗೆ ಕರೆತಂದು ಹಿಂಸಿಸಿರುವುದು ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ಅಮೃತಹಳ್ಳಿ ಪೊಲೀಸ್ ಸಿಬ್ಬಂದಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಇನ್ಸ್‌ಪೆಕ್ಟರ್ ರತ್ನಾಕರ ಶೆಟ್ಟಿ ಮತ್ತು ಶೋಯಲ್ ಜೊತೆಗೂಡಿ ಹೊಲಿಗೆ ಯಂತ್ರದ ಅಂಗಡಿ ಮಾಲೀಕನನ್ನು ಹಿಂಸಿಸಿ, ಲಂಚಕ್ಕೆ ಬೇಡಿಕೆ ಇಟ್ಟಿರುವುದನ್ನು ಸಿಬ್ಬಂದಿ ಖಚಿತಪಡಿಸಿದ್ದಾರೆ. ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಎಂ. ಚಂದ್ರಪ್ಪ ಅವರಿಂದಲೂ ಈ ಬಗ್ಗೆ ಹೇಳಿಕೆ ಪಡೆಯಲಾಗಿದೆ.












Click it and Unblock the Notifications