ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲೊಂದು ಮಿನಿ ವಿನಿವಿಂಕ್ಸ್ ಜಾಲ

By Mahesh
|
Google Oneindia Kannada News

Fruad case, Mysore
ಮೈಸೂರು, ಸೆ. 7: ನೆಟ್ ವರ್ಕ್ ಮಾರ್ಕೆಂಟಿಂಗ್ ಸ್ಕೀಮ್ ಮೂಲಕ ದುಡ್ಡು ಡಬಲ್ ಮಾಡುವ ಆಸೆ ಹುಟ್ಟಿಸಿದ ಚೆನ್ನೈ ಮೂಲಕ ಬೋಗಸ್ ಕಂಪನಿಯಿಂದ ಮೈಸೂರು ಜಿಲ್ಲೆ ಜನತೆ ಬೇಸ್ತು ಬಿದ್ದಿದ್ದಾರೆ.

ಬೋಗಸ್ ಕಂಪನಿಯ ಅವ್ಯವಹಾರ ಮೊತ್ತ ಕನಿಷ್ಠವೆಂದರೂ ಒಂದೂವರೆ ಸಾವಿರ ಕೋಟಿ ರು ಎಂದು ಹೇಳಲಾಗಿದೆ. ಕಳೆದ ಎಂಟು ಹತ್ತು ವರ್ಷದಿಂದ ತಣ್ಣಗೆ ನಡೆದಿದ್ದ ಈ ವಂಚನೆ ಜಾಲ ಬಯಲಾದ ಮೇಲೆ ಮೈಸೂರು ಜನರೆ ಬೆಚ್ಚಿದ್ದಾರೆ.

ನಗರದ ಕಾಳಿದಾಸ ರಸ್ತೆಯಲ್ಲಿ ಡೈಕೂನ್ಸ್ ಮಾಲ್ ರಿಟೈಲ್ ಕಂಪೆನಿ ಎಂಬ ಹೆಸರಿನ ನೆಟ್‌ವರ್ಕ್ ಡೀಲರ್‌ಶಿಪ್ ಸ್ಕೀಮ್ ಅನ್ನು ಕ್ಲಿಂಟನ್ ಹಾಗೂ ಕೊಳ್ಳೇಗಾಲದ ರಘುನಂದನ್ ಎಂಬವರು ಆರಂಭಿಸಿದರು.

ಮೈಸೂರು ಜಿಲ್ಲೆ ಸೇರಿದಂತೆ ದೇಶದ ಹಲವು ರಾಜ್ಯದ ಸಾವಿರಾರು ಮಂದಿಗೆ ಪಂಗನಾಮ ಹಾಕಿದ್ದು, ವಿನಿವಿಂಕ್ಸ್ ಮೀರಿಸುವಂಥ ನೆಟ್ವರ್ಕ್ ಜಾಲ ಇದಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?: ಖಾಸಗಿ ಹೊಟೇಲ್‌ವೊಂದರಲ್ಲಿ ಕಂಪೆನಿಯ ಹೂಡಿಕೆದಾರರು ಮತ್ತು ಪ್ರತಿನಿಧಿಗಳ ನಡುವೆ ನಡೆದಿದ್ದ ಸಭೆಯಲ್ಲಿ ಯಾವುದೋ ವಿಷಯಕ್ಕೆ ವಾಗ್ವಾದ ನಡೆಯಿತು. ಪ್ರಕರಣ ನಜರ್‌ಬಾದ್ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ವಂಚನೆ ಜಾಲ ಬೆಳಕಿಗೆ ಬಂದಿತು.

ಸಭೆಯಲ್ಲಿ ಮಾತನಾಡಿದ ಕಂಪನಿ ಪ್ರತಿನಿಧಿಗಳು ನಿಮ್ಮ ಹಣ ವಾಪಾಸ್ ಬೇಕಾದರೆ ಪ್ರತಿಯೊಬ್ಬರು 1,200 ವಂತಿಗೆ ನೀಡಿ ಹೋರಾಟ ಮಾಡೋಣ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಹೂಡಿಕೆದಾರರು ಕೈಕೈ ಮಿಲಾಯಿಸಿದ್ದಾರೆ.

ಏನಿದರ ಗುಟ್ಟು: ಗ್ರಾಹಕರು ಸಾವಿರ ರೂ. ನೀಡಿ ಸದಸ್ಯರಾದರೆ 278 ರೂ.ಗಳ ಷೇರು ಬಂಡವಾಳ ಹಿಡಿದುಕೊಂಡು ಪ್ರತಿ ತಿಂಗಳು 722 ರೂ.ಗಳನ್ನು ಅವರಿಗೆ ಐಸಿಐಸಿಐ, ಆಕ್ಸಿಸ್, ಎಸ್‌ಬಿಐ ಇತ್ಯಾದಿ ಬ್ಯಾಂಕ್‌ಗಳ ಮೂಲಕ ವಾಪಸ್ ನೀಡಲಾಗುತ್ತಿತ್ತು.

2008ರ ವೇಳೆಗೆ ನಗರದಲ್ಲೇ 53 ಕೋಟಿ ರೂ.ಗೂ ಮೀರಿ ಸಂಗ್ರಹವಾದರೆ ಜಿಲ್ಲೆಯಿಂದ ನೂರಾರು ಕೋಟಿ ರೂ. ವ್ಯವಹಾರವಾಗಿತ್ತು. ಇತ್ತೀಚೆಗೆ ಕಚೇರಿಯನ್ನು ಏಕಾಏಕಿ ಮುಚ್ಚಲಾಗಿತ್ತು.

ಈಗ ನಜರ್‌ಬಾದ್ ಠಾಣೆ ಇನ್ಸ್‌ಪೆಕ್ಟರ್ ಮೋಹನ್‌ಕುಮಾರ್ ಕಂಪನಿಯ ಪ್ರತಿನಿಧಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.

English summary
Chennai based bogus network marketing company has looted money in Mysore. Nazarabad Police have registered a fraud case against accused Kollegal Raghunandan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X