ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ ಸಿಇಒ ಕರೋಲ್ ಕರೆ ಮೂಲಕ ಉಚ್ಚಾಟನೆ

By Mahesh
|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಸೆ.7: ಅಂತರ್ಜಾಲ ಕ್ಷೇತ್ರದ ದಿಗ್ಗಜ ಯಾಹೂ ಸಂಸ್ಥೆ ಸಿಇಒ ಸ್ಥಾನದಿಂದ ಕರೋಲ್ ಬಾರ್ಟ್ಜ್ ಅವರನ್ನು ಉಚ್ಚಾಟಿಸಲಾಗಿದೆ. ಸಂಸ್ಥೆ ಹಾಲಿ ಆರ್ಥಿಕ ವಿಭಾಗದ ಅಧಿಕಾರಿ ಟಿಮ್ ಮೊರ್ಸ್ ಅವರನ್ನು ಕರೋಲ್ ಸ್ಥಾನದಲ್ಲಿ ಕೂರಿಸಲಾಗಿದೆ.

ಯಾಹೂ ಸಿಇಒ ಕರೋಲ್ ಅವರಿಗೆ ಫೋನ್ ಕರೆ ಮಾಡಿ ಸಂಸ್ಥೆಯ ಮುಖ್ಯಸ್ಥ ರಾಯ್ ಬೊಸ್ಟಕ್ ಅವರು ಉಚ್ಚಾಟಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ. ಈ ಬಗ್ಗೆ ಕರೋಲ್ ಕೂಡಾ ತನ್ನ ಉದ್ಯೋಗಿಗಳಿಗೆ ಇಮೇಲ್ ಕಳಿಸಿದ್ದಾಳೆ.

"I am very sad to tell you that I've just been fired over the phone by Yahoo's Chairman of the Board. It has been my pleasure to work with all of you and I wish you only the best going forward,"

ಎಂದು ಇಮೇಲ್ ನಲ್ಲಿ ಹೇಳಲಾಗಿದೆ.

ಸಿಎಫ್ ಒ ಆಗಿದ್ದ ಟಿಮ್ ಮೋರ್ಸ್ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಆಗಿ ಎರಡು ವರ್ಷಕ್ಕೆ ಮಾತ್ರ ನಿಯುಕ್ತಿಗೊಂಡಿದ್ದಾರೆ. ಶಾಶ್ವತವಾಗಿ ಮತ್ತೊಬ್ಬ ಸಮರ್ಥ ನಾಯಕರನ್ನು ಕರೆತರುವ ನಿಟ್ಟಿನಲ್ಲಿ ಯಾಹೂ ಹುಡುಕಾಟ ನಡೆಸಿದೆ.

ಇಷ್ಟೆಲ್ಲ ರಾದ್ಧಾಂತವಾದರೂ ನ್ಯಾಸ್ ಡಾಕ್ ನಲ್ಲಿ ಯಾಹೂ ಷೇರುಗಳು 12.91 ಯುಎಸ್ ಡಾಲರ್ ನಿಂದ 13.72 ಯುಎಸ್ ಡಿನಷ್ಟು ಏರಿಕೆ ಕಂಡು ಅಚ್ಚರಿ ಮೂಡಿಸಿದೆ.

English summary
Carol Bartz, Yahoo CEO has been fired and replaced with Tim Morse, Chief financial officer, ending Bartz's two year tenure, said Yahoo Inc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X