ಎಚ್ ಡಿಕೆ ದಂಪತಿ ಹಾಜರಾಗಿಲ್ಲ:ಯಡಿಯೂರಪ್ಪ ನಿಮ್ಹಾನ್ಸ್ ಗೆ

ಅನಾರೋಗ್ಯದಿಂದಾಗಿ ಕುಮಾರಸ್ವಾಮಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಅವರ ಪರ ವಕೀಲರು ಕೋರ್ಟಿಗೆ ಹೇಳಿದಾಗ ತಕ್ಷಣ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.
ಜಂತಕಲ್ ಮೈನಿಂಗ್ ಹಗರಣ ಮತ್ತು ವಿಶ್ವ ಭಾರತಿ ಸೈಟು ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ಕೋರ್ಟ್ ಮುಂದೆ ದಂಪತಿಯಿಬ್ಬರೂ ಖುದ್ದಾಗಿ ಬುಧವಾರ ಹಾಜರಾಗಲೇಬೇಕಾದ ಅನಿವಾರ್ಯತೆ ಇದೆ. ಇಂದು ಮಧ್ಯಾಹ್ನ 1 ಗಂಟೆಗೆ ನ್ಯಾಯಾಲಯ ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನೀಡಲು ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಈ ದಂಪತಿ ಒಟ್ಟಿನಲ್ಲಿ ಈಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಈ ಮಧ್ಯೆ, ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಬಿ. ಎಸ್. ಯಡಿಯೂರಪ್ಪ ಅವರ ವಿಚಾರಣೆ ಮಧ್ಯಾಹ್ನ ನಡೆಯಲಿದೆ. ಯಡಿಯೂರಪ್ಪ ಅವರು ಖುದ್ದು ಹಾಜರಾಗುವುದು ಕಡ್ಡಾಯವಾಗಿದೆ. ಆದರೆ ಇದೀಗ ಬಂದ ಸುದ್ದಿಯಂತೆ ಯಡಿಯೂರಪ್ಪ ಅವರು ಚಿಕಿತ್ಸೆಗೆಂದು ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, 30 ನಿಮಿಷಗಳ ತಪಾಸಣೆ ಬಳಿಕ ಹೊರ ಬಂದಿದ್ದಾರೆ.












Click it and Unblock the Notifications