ದೆಹಲಿ ಸ್ಫೋಟದ ಹೊಣೆ ಹೊತ್ತ ಹುಜಿ ಸಂಘಟನೆ
ನವದೆಹಲಿ, ಸೆ.7: ದೆಹಲಿ ಹೈಕೋರ್ಟ್ ನ ಗೇಟ್ ಸಂಖ್ಯೆ 5 ರ ಬಳಿ ಬಾಂಬ್ ಸ್ಫೋಟಿಸಿದೆ. ಭಾರಿ ಸ್ಫೋಟದ ಪರಿಣಾಮ 10 ಜನ ಸಾವನ್ನಪ್ಪಿದ್ದು, 50 ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ಬುಧವಾರ ಬೆಳಗ್ಗೆ 10.17ರ ಸುಮಾರಿಗೆ ನಡೆದಿದೆ.[ವಿಡಿಯೋ ನೋಡಿ]
3.00:
* ಸ್ಫೋಟದಿಂದ ಗಾಯಗೊಂಡವರನ್ನು ಕಾಣಲು ಹೊದ ಎಐಸಿಐ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಘೇರಾವ್.
2.15:
*ಸ್ಫೋಟದ ಹೊಣೆ ಹೊತ್ತ ಹುಜಿ ಉಗ್ರ ಸಂಘಟನೆ.
* ಪ್ರಕರಣದ ತನಿಖೆ ಎನ್ಎಎಸ್ ಜಿ ಗೆ ವಹಿಸಿದ ಗೃಹ ಸಚಿವ ಚಿದಂಬರಂ.
1.44:
* ಮೃತರ ಕುಟುಂಬಕ್ಕೆ 4 ಲಕ್ಷರೂ ಹಾಗೂ ಗಾಯಾಳುಗಳಿಗೆ 1 ಲಕ್ಷ ರೂ ಪರಿಹಾರ ಘೋಷಿಸಿದ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್
1.15:
* ಕೋರ್ಟ್ ಆವರಣ ವೀಕ್ಷಣೆಗೆ ಗೃಹ ಸಚಿವ ಪಿ ಚಿದಂಬರಂ ಆಗಮನ
12.45:
* ದೆಹಲಿ ಸೂಟ್ ಕೇಸ್ ಬ್ಲಾಸ್ಟ್ ನಂತರ ಕೇಂದ್ರ ಗೃಹ ಸಚಿವಾಲಯದಿಂದ ದೇಶದಾದ್ಯಂತ ಕಟ್ಟೆಚ್ಚರ ನೀಡಲಾಗಿದೆ ಎಂದು ಪಿ ಚಿದಂಬರಂ ಸಂಸತ್ತಿನಲ್ಲಿ ಘೋಷಣೆ.
12.30:
ಹೆಲ್ಪ್ ಲೈನ್ ಸಂಖ್ಯೆಗಳು
* ಸಫದರ್ಜಂಗ್ ಆಸ್ಪತ್ರೆ: 011-26707444
* ಆರ್ ಎಂಎಲ್ ಆಸ್ಪತ್ರೆ: O11-23744721, 23365525
12.20:
* ದಕ್ಷಿಣ ದೆಹಲಿಯ ಕಾಲೇಜಿಗೆ ಬಾಂಬ್ ದಾಳಿ ಬೆದರಿಕೆ ಇತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.
12.00:
* ಹೈಕೋರ್ಟ್ ಬಳಿ ಸ್ಫೋಟ, ಉಗ್ರರ ಕೃತ್ಯ ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ದೃಢಪಡಿಸಿದ್ದಾರೆ.
* ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಏಮ್ಸ್, ಸಫ್ ದರ್ಜಂಗ್ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
11.30:
* ಎಲ್ಲಾ ಕೋರ್ಟ್ ಕಲಾಪಗಳು ಸ್ಥಗಿತಗೊಂಡಿದೆ.[ಗ್ಯಾಲರಿ: ಸ್ಫೋಟ ನಂತರದ ಚಿತ್ರಗಳು]
11.20:
* 9 ಜನ ಸಾವನ್ನಪ್ಪಿದ್ದು, 50 ಜನ ಗಾಯಗೊಂಡಿರುವುದು ದೃಢಪಟ್ಟಿದೆ ಕೇಂದ್ರ ಗೃಹ ಕಾರ್ಯದರ್ಶಿ ಆರ್ ಕೆ ಸಿಂಗ್ ಹೇಳಿಕೆ.
* ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಸಲಾಗಿದೆ ಎಂದು ಎನ್ ಎಸ್ ಜಿ ಡಿಜಿ ಹೇಳಿದ್ದಾರೆ.
11.10:
* ಘಟನಾ ಸ್ಥಳಕ್ಕೆ ಎನ್ ಐಎ ಹಾಗೂ ಎನ್ ಎಸ್ ಜಿ ಕಮಾಂಡೊಗಳ ಆಗಮನ.
* ಫೋರೆನ್ಸಿಕ್ ತಂಡದಿಂದ ಪಾರ್ಕಿಂಗ್ ಸ್ಥಳ ಪರಿಶೀಲನೆ.
11:00:
* ದೆಹಲಿ ಕೋರ್ಟ್ ಆವರಣಕ್ಕೆ ಪ್ರವೇಶ ಪಡೆಯಲು ಸುಮಾರು 100-200 ಜನ ಗೇಟ್ 5 ರ ಬಳಿ ಕಾದು ನಿಂತಿದ್ದರು.
* ಗೇಟ್ 5 ರ ಬಳಿಯ ಪಾರ್ಕಿಂಗ್ ಲಾಟ್ ನಲ್ಲಿ ಸ್ಫೋಟ ನಡೆದಿರುವುದು ಖಚಿತಪಡಿಸಲಾಗಿದೆ.
* ಮೃತರಲ್ಲಿ ವಕೀಲರ ಸಂಖ್ಯೆ ಅಧಿಕ ಎನ್ನಲಾಗಿದೆ.
ಸಮಯ10:50 ಗಂಟೆ:
ಪ್ರತ್ಯಕ್ಷದರ್ಶಿ ಕೀರ್ತಿ ಉಪ್ಪಳ್ ಎಂಬುವರ ಪ್ರಕಾರ 5 ಜನ ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಮಂದಿ ಸಾವನ್ನಪ್ಪಿರಬಹುದು.
10:40:
ದೆಹಲಿ ಕೋರ್ಟ್ ಆವರಣದ ಮುಖ್ಯ ಗೇಟ್ ಹಾಗೂ ಅತ್ಯಂತ ಜನನಿಬಿಡ ಸ್ಥಳವಾದ ಗೇಟ್ 5 ಬಳಿ ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಬಾಂಬ್ ಅನ್ನುಭ್ರೀಫ್ ಕೇಸ್ ನಲ್ಲಿಡಲಾಗಿತ್ತು ಎಂದು ದೆಹಲಿ ಪೊಲೀಸ್ ಸ್ಪಷ್ಟಪಡಿಸಿದ್ದಾರೆ.
10:25: ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ 5 ಕ್ಕೂ ಅಧಿಕ ಅಗ್ನಿಶಾಮಕ ದಳ ದೌಡು. ಗಾಯಗೊಂಡವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
10.17:
ಗೇಟ್ ನಂ.5 ಬಳಿ ಭಾರಿ ಸ್ಫೋಟ, ಕೋರ್ಟ್ ಆವರಣದಲ್ಲಿ ಗೊಂದಲ ಗಲಿಬಿಲಿ.
ಊಟದ ಡಬ್ಬಿಯಲ್ಲಿ ಬಾಂಬ್ ಇತ್ತು ಎಂದು ತಕ್ಷಣಕ್ಕೆ ತಿಳಿದು ಬಂದಿದೆ. ದೆಹಲಿ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.












Click it and Unblock the Notifications