ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲು ಶಿಕ್ಷೆಯಿಂದ ಪಾರಾದ ನಟ ಶ್ರೀನಿವಾಸಮೂರ್ತಿ

|
Google Oneindia Kannada News

Actor Srinivas Murthy
ಬೆಂಗಳೂರು, ಸೆ. 7: ಹಿರಿಯ ನಟ ಶ್ರೀನಿವಾಸಮೂರ್ತಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದರಿಂದ ನಟ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇವರ ವಿರುದ್ದ ವಂಚನೆ ಆರೋಪದಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ಶಿಕ್ಷೆ ವಿಧಿಸಿತ್ತು.

ಐದು ವರ್ಷದ ಕೆಳಗೆ ಶ್ರೀನಿವಾಸಮೂರ್ತಿ ಮೇಲೆ ಮುರಳಿಕೃಷ್ಣ ಎನ್ನುವವರು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿದ್ದರೆಂದು ಆರೋಪಿಸಿ ದೂರು ದಾಖಲಿಸಿದ್ದರು. ಶ್ರೀನಿವಾಸಮೂರ್ತಿ ಮತ್ತು ಇನ್ನೋರ್ವ ಆರೋಪಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಘನ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಏನಿದು ಕೇಸ್? : 1987ರಲ್ಲಿ ಬಿಡುಗಡೆಗೊಂಡಿದ್ದ 'ಬಾಳನೌಕೆ' ಸಿನಿಮಾ ವಿತರಣೆಗೆ ಸಂಬಂಧಿಸಿದಂತೆ ಶ್ರೀನಿವಾಸಮೂರ್ತಿ ಐದು ಲಕ್ಷ ಮೊತ್ತಕ್ಕೆ ಪದ್ಮಶ್ರೀ ಕಂಬೈನ್ಸ್ ಸಂಸ್ಥೆಯೊಂದಿದೆ ಒಪ್ಪಂದ ಮಾಡಿಕೊಂಡಿದ್ದರು. ಈ ಸಂಬಂಧ 2,13,000 ಹಣ ವಾಪಸ್ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದರು ಎಂದು ಮುರಳಿಕೃಷ್ಣ ಎನ್ನುವವರು ದೂರು ನೀಡಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಶ್ರೀನಿವಾಸಮೂರ್ತಿ ಮತ್ತು ಇನ್ನೊಬ್ಬ ಆರೋಪಿಗೆ ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ ಇಬ್ಬರು ಮೇಲ್ಮನವಿ ಸಲ್ಲಿಸಿದ್ದರು.

English summary
Kannada film actor Srinivas Murthy escapes 3 year jail term, as Karnataka High Court quashes order passed by magistrate court in a case related to cheating and forgery. It was alleged that Srinivas Murthy had forged documents to show that he had made payment to a distributor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X