ರೆಡ್ಡಿಗಳ ನಂತರ ಸುಷ್ಮಾ ಸ್ವರಾಜ್ ಬಂಧನ ಸಾಧ್ಯತೆ

ರೆಡ್ಡಿ ಸೋದರರು, ಬಿಜೆಪಿಯ ಹಿರಿಯರಾದ ಸುಷ್ಮಾ ಹಾಗೂ ವೆಂಕಯ್ಯ ನಾಯ್ಡು ಅವರ ಮಧ್ಯೆ ವ್ಯಾವಹಾರಿಕ ಸಂಬಂಧ ಇದೆ. ಆದ್ದರಿಂದ ಅವರಿಬ್ಬರನ್ನೂ ಬಂಧಿಸಬೇಕು ಎಂದು ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
ರೆಡ್ಡಿ ಸೋದರರು ಮತ್ತು 'ತಾಯಿ' ಸುಷ್ಮಾ
ನಡುವೆ ವ್ಯಾವಹಾರಿಕ ನೆಂಟಸ್ತನ ಇದೆ. ಕಾಂಗ್ರೆಸ್ ಇದನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಆದ್ದರಿಂದ ಶೀಘ್ರವೇ ಇವರನ್ನೂ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
'ವಾಸ್ತವವಾಗಿ ರಡ್ಡಿಗಳನ್ನು 3 ವರ್ಷಗಳ ಹಿಂದೆಯೇ ಬಂಧಿಸಬೇಕಿತ್ತು. ಗಣಿ ಹಣದಿಂದಾಗಿಯೇ ಅವರು ಅಧಿಕಾರದಲ್ಲಿ ಮುಂದುವರಿದರು' ಎಂದು ದಿಗ್ವಿಜಯ್ ವಿಷಾದಿಸಿದರು.












Click it and Unblock the Notifications