ರೆಡ್ಡಿ ಹುಟ್ಟೂರಿನ ಸ್ವಾಮೀಜಿ ಹೇಳಿದ್ದ ಭವಿಷ್ಯ ನಿಜವಾಯಿತು!
ಶ್ರೀಕಾಳಹಸ್ತಿ,
ಸೆ.6: 'ಗಣಿಗಾರಿಕೆಯಲ್ಲಿ ತೊಡಗಿರುವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಪೊಲೀಸರು ಬಂಧಿಸುತ್ತಾರೆ' ಎಂದು ಸಮೀಪದ ಅಂಜಿಮೇಡು ಗ್ರಾಮದ ಖ್ಯಾತ ಸ್ವಾಮೀಜಿ ಸರಿಯಾಗಿ ಒಂದು ವರ್ಷದ ಹಿಂದೆ ಭವಿಷ್ಯ ನುಡಿದಿದ್ದರು! id="toptextpromo">ಒಂದು
ವರ್ಷದೊಳಗಾಗಿ ಜನಾರ್ದನ ರೆಡ್ಡಿ ಬಂಧನವಾಗುತ್ತಾರೆ. ಆತನ ರಾಜಕೀಯ ಭವಿಷ್ಯ ಅವನತಿ ಕಾಣುತ್ತದೆ ಎಂದು ಶ್ರೀಕಾಳಹಸ್ತಿ ಯೆರಪೇಡು ಮಂಡಲ ವ್ಯಾಪ್ತಿಯಲ್ಲಿರುವ ಈ ಗ್ರಾಮದ ಸ್ವಾಮೀಜಿ ಅಂದೇ ನುಡಿದಿದ್ದರು. id='are-slot-1' class='oiad oi-axt oiadv'> id='top-searched-articles'>ಅಷ್ಟಕ್ಕೂ
ಈ ಸ್ವಾಮೀಜಿಯೇನೂ ಅವರಾಗಿ ಅವರೇ ಈ ಭವಿಷ್ಯ ಹೇಳಿರಲಿಲ್ಲ. ಇನ್ನೂ ಕುತೂಹಲದ ಸಂಗತಿಯೆಂದರೆ ನಮ್ಮ ಜನಾರ್ದನ ರೆಡ್ಡಿಗಾರು ಕರ್ನಾಟಕದ ಮುಖ್ಯಮಂತ್ರಿಯಾಗುವ ಯೋಗಾಯೋಗ ಇದೆಯಾ ಎಂದು ಕಾಳಹಸ್ತಿಯಲ್ಲಿರುವ ರೆಡ್ಡಿಯ ಆತ್ಮೀಯರು ರೆಡ್ಡಿ ರಾಕೆಟ್ ವೇಗದಲ್ಲಿ ಪ್ರವರ್ಧನಮಾನಕ್ಕೆ ಬರುತ್ತಿರುವುದನ್ನು ಕಂಡು ಕುತೂಹಲ ತಡೆಯದೆ ಸ್ವಾಮೀಜಿಯನ್ನು ಕೇಳಿದ್ದರು. ಮುಖದ ಮೇಲೆ ಹೊಡೆದಂತೆ ಆ ಸ್ವಾಮಿಜಿ 'ಲೇದು' ಎಂದು ಅಡ್ಡಡ್ಡ ತಲೆ ಆಡಿಸಿದ್ದರು!











Click it and Unblock the Notifications