ಗಡಿ ಗುರುತು ನಾಶ, ಅರಣ್ಯ ಕಾಯಿದೆ ಉಲ್ಲಂಘನೆ: ರೆಡ್ಡಿ ಸೆರೆ

ಗಡಿ ಗುರುತು ನಾಶ ಮತ್ತು ಅರಣ್ಯ ಕಾಯಿದೆ ಉಲ್ಲಂಘನೆಯ ಆರೋಪದ ಮೇಲೆ ಸೆಕ್ಷನ್ 120 ಮತ್ತು 120ಬಿ ಅನುಸಾರ ರೆಡ್ಡಿ ದ್ವಯರನ್ನು ಬಂಧಿಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಐಪಿಸಿ ಸೆಕ್ಷನ್ 120ಬಿ, 379, 411, 420, 422 ಮತ್ತು 447ರ ಅಡಿಯಲ್ಲಿ ಹಾಗೂ ಗಣಿಗಾರಿಕೆ ಮತ್ತು ಅರಣ್ಯ, ಖನೀಜ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿಯ ವೇಳೆಯಲ್ಲಿ ಸಿಬಿಐ ತಂಡವು 1530 ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ 112 ಕಬ್ಬಿಣ ಅದಿರು ಮಾದರಿಗಳನ್ನು ಸಹ ಸಂಗ್ರಹಿಸಿದೆ ಎನ್ನಲಾಗಿದೆ.
ಕರ್ನಾಟಕ ಆಂಧ್ರಪ್ರದೇಶ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿ ಚಟುವಟಿಕೆ ನಡೆಸಿದ ರೆಡ್ಡಿ ಸಹೋದರರ ಒಡೆತನದ ಓಎಂಸಿ ವಿರುದ್ಧ ಸಿಬಿಐ 2009ರಲ್ಲಿ ದೂರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಜನಾ ರೆಡ್ಡಿ ಬಂಧನದ ಬಗ್ಗೆ ಮುಖ್ಯಮಂತ್ರಿ ಸದಾನಂದ ಗೌಡ ಅವರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಂಧನ ವಿಷಯ ನನ್ನ ಗಮನಕ್ಕೂ ಬಂದಿದೆ. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷಕ್ಕೆ ಇದರಿಂದ ಯಾವುದೇ ಮುಜುಗುರ ತಂದಿಲ್ಲ' ಎಂದು ಮುಖ್ಯಮಂತ್ರಿ ಹೇಳಿದ್ದಾರೆ.












Click it and Unblock the Notifications