ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಜತೆ ರೆಡ್ಡಿ ಹೈದರಾಬಾದಿಗೆ, ಬೆಂಗಳೂರಿನಲ್ಲೂ ದಾಳಿ

By Srinath
|
Google Oneindia Kannada News

cbi-raids-janardhan-reddy-bangalore-house
ಬಳ್ಳಾರಿ, ಸೆ.5: ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಬೆಂಗಳೂರಿನ ಯಲಹಂಕದಲ್ಲಿರುವ ಪಾರಿಜಾತ ನಿವಾಸ ಮೇಲೂ ಸಿಬಿಐ ದಾಳಿ ಇದೀಗ ನಡೆಸಿದೆ. ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐನ ಡಿಐಜಿ ಲಕ್ಷ್ಮಿನಾರಾಯಣ್ ನೇತೃತ್ವ ತಂಡ ಸೋಮವಾರ ಬೆಳಗಿನ ಜಾವ ಬಳ್ಳಾರಿಯಲ್ಲಿ ದಾಳಿ ನಡೆಸಿದ್ದಾರೆ.

ಮೊದಲು ಆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ ಶ್ರೀನಿವಾಸ್ ರೆಡ್ಡಿ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ತಕ್ಷಣ ಜನಾರ್ದನ ರೆಡ್ಡಿ ಅವರ 'ಕುಟೀರ' ನಿವಾಸದ ಮೇಲೆ ದಾಳಿ ನಡೆಸಿದರು. ರೆಡ್ಡಿಯನ್ನು ವಶಕ್ಕೆ ತೆಗೆದುಕೊಂಡು ಸಿಬಿಐ ಅವರ ನಿವಾಸವನ್ನು ಜಾಲಾಡಿದ್ದಾರೆ. ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಹಲವು ಗಂಟೆಗಳ ಕಾಲ ಎರಡೂ ನಿವಾಸಗಳನ್ನು ಜಾಲಾಡಿದ ಬಳಿಕ ರೆಡ್ಡಿ ದ್ವಯರನ್ನು ಗುಂತಕಲ್ ಮಾರ್ಗವಾಗಿ ಹೈದರಾಬಾದಿಗೆ ಬೆಳಗ್ಗೆ 6.40ಕ್ಕೆ ತಮ್ಮ ವಾಹನಗಳಲ್ಲಿ ಕರೆದೊಯ್ದಿದ್ದಾರೆ. ಇಬ್ಬರನ್ನೂ ಸೋಮವಾರ ಮಧ್ಯಾನ್ಹ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. ಈ ಮಧ್ಯೆ, ರೆಡ್ಡಿ ಅವರ ಹೆಲಿಕಾಪ್ಟರ್ ಅನ್ನು ಸೀಜ್ ಮಾಡಲಾಗಿದೆ.

ಓಬಳಾಪುರಂ ಮೈನಿಂಗ್ ಕಂಪನಿ ಅವ್ಯವಹಾರದ ಕುರಿತು ಕಳೆದ ಎರಡು ವರ್ಷಗಳಿಂದ ಆಂಧ್ರಪ್ರದೇಶದ ಹೈಕೋರ್ಟಿನಲ್ಲಿ ವಿಚಾರಣೆ ನಡೆದಿತ್ತು. ಆದರೆ ಲೋಕಾಯುಕ್ತ ಅಕ್ರಮ ಗಣಿಗಾರಿಗೆ ವರದಿಯ ಫಲವಾಗಿ ಈ ದಾಳಿ ನಡೆದಿಲ್ಲ ಎಂಬುದು ಗಮನಾರ್ಹ.

English summary
CBI Raid on Janardhan Reddy house in Bangalore residence ( Parijata, Yelahanka) on the wee hours of Monday wee 5th Sept. Arrested Janardhan Reddy and B Srinivasa Reddy being taken to CBI special court, Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X