ಬಳ್ಳಾರಿ to ಹೈದರಾಬಾದ್ ರೆಡ್ಡಿ ಜರ್ನಿ ಟೈಮ್ ಲೈನ್

Janardhan Reddy
ಬಳ್ಳಾರಿ, ಸೆ.5: ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಅಳಿಯ ಬಿ. ಶ್ರೀನಿವಾಸ ರೆಡ್ಡಿ ಅವರ ಒಡೆತನದ ಓಬಳಾಪುರಂ ಗಣಿ ಕಂಪನಿ ಮೇಲೆ ಸೋಮವಾರ ಮುಂಜಾನೆ ದಾಳಿ ನಡೆದ ಸಮಯದಿಂದ ಹೈದರಾಬಾದಿಗೆ ರವಾನೆಯಾದ ಸಮಯದ ತನಕ ನಡೆದ ಘಟನಾವಳಿಗಳು.

* ರಾತ್ರೋರಾತ್ರಿ ಓಬಳಾಪುರಂ ಗಣಿ ಕಂಪನಿ ಕಚೇರಿ ಮೇಲೆ ಸಿಬಿಐ ಡಿಐಜಿ ಪಿ.ವಿ. ಲಕ್ಷ್ಮಿನಾರಾಯಣ ನೇತೃತ್ವದ ತಂಡದಿಂಡ ದಾಳಿ.
* ಮುಂಜಾನೆ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಓಎಂಸಿ ಎಂಡಿ ಬಿ.ವಿ ಶ್ರೀನಿವಾಸ್ ಬಳ್ಳಾರಿ ನಿವಾಸದ ಮೇಲೆ ದಾಳಿ
* 6.40 ಕ್ಕೆ ಜನಾರ್ದನ ರೆಡ್ಡಿ ಅವರ ನೆಚ್ಚಿನ ಹೆಲಿಕಾಪ್ಟರ್ ರುಕ್ಮಿಣಿಯನ್ನು ವಶಪಡಿಸಿಕೊಂಡ ಸಿಬಿಐ.
* 7.00 ಕ್ಕೆ ಬೆಂಗಳೂರಿನ ರೆಡ್ಡಿ ನಿವಾಸ 'ಪಾರಿಜಾತ' ಮೇಲೂ ಸಿಬಿಐ ದಾಳಿ, ದಾಖಲೆಗಳು ವಶ.
* 6.40ಕ್ಕೆ ಕ್ಕೆ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ್ ಬಂಧನ. ಬಿಳಿ ಇನ್ನೋವಾ ಕಾರಿನಲ್ಲಿ ಹೈದರಾಬಾದಿನತ್ತ ಪಯಣ
* 7.50ಕ್ಕೆ ಮಾರ್ಗ ಬದಲಾವಣೆ, ಗುಂತಕಲ್ ಕಡೆಗೆ ತಿರುಗಿದ ಕಾರು.
* 8.10ಕ್ಕೆ ಗುಂತಕಲ್ ನಲ್ಲಿ ಉಪಹಾರ ಸೇವನೆ ನಂತರ ಪಯಣ ಮುಂದುವರಿಕೆ
* 10.00ಕ್ಕೆ ರೆಡ್ಡಿ ಸೋದರರಿಂದ ಕಾನೂನು ಸಮರ ಆರಂಭ, ವಕೀಲ ರಾಮಚಂದ್ರ ರೆಡ್ಡಿ ಜತೆ ಸಮಾಲೋಚನೆ.
* ವಾರಂಟ್ ಇಲ್ಲದೆ ಜನಾರ್ದನ ರೆಡ್ಡಿ ಬಂಧಿಸಿರುವುದಕ್ಕೆ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಖಂಡನೆ
* ಮಧ್ನಾಹ್ನ 12 ರ ಸುಮಾರಿಗೆ ಹೈದರಾಬಾದ್ ಸಿಬಿಐ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ.
* 12.45 ರ ಸುಮಾರಿಗೆ ಶಂಷಾಬಾದ್ ತಲುಪಿದ ಸಿಬಿಐ ತಂಡ.
* ಸಿಬಿಐ ತಂಡ ಹಾಗೂ ಜನಾರ್ದನ ರೆಡ್ಡಿ ಅವರು ಮಧ್ಯಾಹ್ನ 2.30 ಗಂಟೆಗೆ ಹೈದರಾಬಾದ್ ತಲುಪಿದೆ.
* ಸಿಬಿಐ ಕಚೇರಿಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ್ ರೆಡ್ಡಿ ಅವರಿಗೆ ಭೋಜನ ವ್ಯವಸ್ಥೆ, ಆರೋಗ್ಯ ತಪಾಸಣೆ.
* ನಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ಕೋರ್ಟ್ ಎದುರು ತೆಲುಗುದೇಶಂ ಪಕ್ಷದ ಕಾರ್ಯಕರ್ತರ ಧರಣಿ, ಜಗನ್, ಜನಾರ್ದನ ರೆಡ್ಡಿಗೆ ಕಠಿಣ ಶಿಕ್ಷೆಗೆ ಆಗ್ರಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+