ಬಿಜೆಪಿಯಲ್ಲಿ ಮತ್ತೆ ಒಡಕು : ಯಡ್ಡಿ vs ಸದಾ

Yeddyurappa Vs Sadananda Gowda
ಬೆಂಗಳೂರು, ಸೆ. 03 : "ಕೊಪ್ಪಳ ಚುನಾವಣೆಯನ್ನು ಯಡಿಯೂರಪ್ಪನವರ ನಾಯಕತ್ವದಲ್ಲಿಯೇ ಸೆಣಸಬೇಕು. ಅವರಿಂದ ಮಾತ್ರ ಗೆಲುವುದು ಸಾಧ್ಯ. ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ನಾಯಕತ್ವದಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ" ಎಂದು ಹೇಳಿರುವ ಡಿಬಿ ಚಂದ್ರೇಗೌಡ ಯಡಿಯೂರಪ್ಪ ವಿರೋಧಿ ಬಣಕ್ಕೆ ಮತ್ತೆ ಬಿಸಿ ಮುಟ್ಟಿಸಿದ್ದಾರೆ.

ಕೊಪ್ಪಳ ಉಪಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೊದಲೇ ಬಿಜೆಪಿಯಲ್ಲಿ ನಾಯಕತ್ವ ಕುರಿತಂತೆ ಮತ್ತೆ ಒಡಕು ಕಾಣಿಸಿಕೊಂಡಿದೆ. ಈಶ್ವರಪ್ಪ ನಾಯಕತ್ವದಲ್ಲಿ ಮಲ್ಲೇಶ್ವರದಲ್ಲಿ ಒಂದು ಸಭೆ, ಯಡಿಯೂರಪ್ಪ ನಾಯಕತ್ವದಲ್ಲಿ ಡಾಲರ್ಸ್ ಕಾಲೋನಿಯಲ್ಲಿ ಮತ್ತೊಂದು ಸಭೆ ನಡೆದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಡಾಲರ್ಸ್ ಕಾಲೋನಿಯಲ್ಲಿ ಇರುವ ಯಡಿಯೂರಪ್ಪ ಅವರ ನಿವಾಸ 'ಧವಳಗಿರಿ'ಯಲ್ಲಿ ಅವರ ಹಿಂಬಾಲಕರಾದ ಡಿಬಿ ಚಂದ್ರೇಗೌಡ, ವಿಎಸ್ ಆಚಾರ್ಯ, ಮುರುಗೇಶ್ ನಿರಾಣಿ, ಸೋಮಣ್ಣ, ರಾಜೂಗೌಡ, ರೇಣುಕಾಚಾರ್ಯ ಮುಂತಾದವರೊಂದಿಗೆ ಕೊಪ್ಪಳ ಚುನಾವಣೆ ಕುರಿತಂತೆ ಸಭೆ ನಡೆಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಚಂದ್ರೇಗೌಡ ಮಾತನಾಡಿ ಯಡಿಯೂರಪ್ಪನೇ ತಮ್ಮ ನಾಯಕ ಎಂದು ಘಂಟಾಘೋಷವಾಗಿ ಸಾರಿದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಟಿ ರವಿ, ಯಡಿಯೂರಪ್ಪ ಅವರ ಪರ ಹೇಳಿಕೆಗೆ ಸ್ವಾಗತ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿನ ಹುಳುಕನ್ನು ಬಿಟ್ಟುಕೊಡಲು ಒಪ್ಪದ ರಾಜ್ಯಾಧ್ಯಕ್ಷ ಈಶ್ವರಪ್ಪ, ನಾವೆಲ್ಲ ಒಗ್ಗಟ್ಟಾಗಿಯೇ ಚುನಾವಣಾ ತಂತ್ರ ಹೂಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+