ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬ ಕಲಹ: ಎಚ್ಎಎಲ್ ಇಂಜಿನಿಯರ್ ಚೆನ್ನೈನಲ್ಲಿ ನೇಣಿಗೆ ಶರಣು

By Srinath
|
Google Oneindia Kannada News

bangalore-hal-engineer-suicide-chennai
ಚೆನ್ನೈ, ಸೆ. 2‌: ಬೆಂಗಳೂರಿನ ಎಚ್ಎಎಲ್ ಘಟಕದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆಯ ಪ್ರಾಯೋಜಿತ ವಿದ್ಯಾರ್ಥಿಯಾಗಿ ಮದ್ರಾಸ್ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಿ. ಗೌರಿ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 36 ವರ್ಷದ ಗೌರಿಶಂಕರ್ ಚೆನ್ನೈನ ಗಿಂಡಿಯಲ್ಲಿರುವ ಹಾಸ್ಟೆಲಿನಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.

ಗೌರಿ ಶಂಕರ್ ಸಾವಿಗೆ ಕುಟುಂಬ ಕಲಹ ಕಾರಣ ಎನ್ನಲಾಗಿದೆ. ಚೆನ್ನೈನ ತಿರುವತ್ತಿಯೂರಿನಲ್ಲಿ ಗೌರಿಶಂಕರ್ ಕುಟುಂಬ ನೆಲೆಸಿದೆ. ಐದು ವರ್ಷಗಳಿಂದ ಬೆಂಗಳೂರಿನ ಎಚ್ಎಎಲ್ ಸಂಸ್ಥೆಯಲ್ಲಿ ಗ್ರೇಡ್ 4 ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕಾವೇರಿ ಹಾಸ್ಟೆಲಿನ ರೂಂ ನಂಬರ್ 372ರಲ್ಲಿ ಬುಧವಾರ ಮಧ್ಯಾಹ್ನ 2.30ರಲ್ಲಿ ಗೌರಿ ಶಂಕರ್ ಮೃತದೇಹ ಪತ್ತೆಯಾಗಿದೆ. ಅವರ ಬಾಯಿಂದ ನೊರೆ ಬರುತ್ತಿತ್ತು ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮೃತನ ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿದ್ದು, ಸೈಬರ್ ಕ್ರೈಂ ವಿಭಾಗಕ್ಕೆ ಹೆಚ್ಚಿನ ತನಿಖೆಗಾಗಿ ಕಳಿಸಿದ್ದಾರೆ.

English summary
Bangalore Hindustan Aeronautics Limited (HAL) engineer B Gowrishankar (36), pursuing an M Tech course in IIT-M under HAL sponsorship, was found dead in his hostel room in Guindy on Wednesday (Aug 31).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X