ಮುಸ್ಲಿಂ ಬಂಧುಗಳಿಗೆ ಶುಭಕೋರಿದ ಹಿಂದೂ ಬಾಂಧವರು

Ramadan celebrated in Bellary
ಬಳ್ಳಾರಿ, ಆ. 31 : ಬಳ್ಳಾರಿ ಜಿಲ್ಲೆಯಾದ್ಯಂತ ರಂಜಾನ್ ಹಬ್ಬ ಸಂಭ್ರಮಗಳಿಂದ ಶಾಂತಿಯುತವಾಗಿ - ಸೌಹಾರ್ದಯುತವಾಗಿ ಬುಧವಾರ ಆಚರಿಸಲ್ಪಟ್ಟಿತು. ಬುಧವಾರ ರಂಜಾನ್ ಮತ್ತು ಗುರುವಾರ ಗಣೇಶ ಚತುರ್ಥಿ ಇರುವುದರಿಂದ ಹಿಂದೂ - ಮುಸ್ಲಿಂ ಬಾಂಧವರು ಒಟ್ಟಾಗಿ ರಂಜಾನ್ ಮತ್ತು ಗಣೇಶನ ಹಬ್ಬವನ್ನು ಆಚರಿಸುತ್ತಿದ್ದಾರೆ.

ಬಳ್ಳಾರಿಯ ಈದ್ಗಾ ಮೈದಾನದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು, ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಬಿಜೆಪಿಯ ಬಹುತೇಕ ಕಾರ್ಯಕರ್ತರು, ಸದಸ್ಯರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ಹೇಳಿದರು. ಪರಸ್ಪರ ಬಿಗಿದಪ್ಪಿಕೊಂಡು ಸಹೋದರತ್ವ, ಸಹಭಾಗಿತ್ವಗಳ ಮಾತುಗಳನ್ನಾಡಿದರು.

ಒಂದು ತಿಂಗಳಕಾಲ ಉಪವಾಸ ಆಚರಿಸಿದ್ದ ವ್ರತಧಾರಿ ಮುಸ್ಲಿಂರು ಮಂಗಳವಾರ ರಾತ್ರಿ ಚಂದ್ರದರ್ಶನ ಪಡೆದು ಉಪವಾಸ ಬಿಟ್ಟಿದ್ದಾರೆ. ಈದ್ಗಾ ಮೈದಾನಕ್ಕೆ ಸಾಗುವ ದಾರಿಯುದ್ದಕ್ಕೂ ಅನೇಕರು ತಂಪು ಪಾನೀಯಗಳನ್ನು, ಶರಬತ್ತು ಮತ್ತು ಕುಡಿಯುವ ನೀರನ್ನು ನೀಡುತ್ತಾ ಬಂಧುಗಳಿಗೆ ಶುಭ ಕೋರುತ್ತಿದ್ದುದ್ದು ಸಾಮಾನ್ಯವಾಗಿತ್ತು.

ಜೆಡಿಎಸ್‌ನ ಮೀನಳ್ಳಿ ಡಿ. ತಾಯಣ್ಣ, ಮುಂಡ್ರಿಗಿ ನಾಗರಾಜ್, ಪಿ. ರಸೂಲ್‌ಸಾಬ್, ಅಬ್ದುಲ್ ಅಜೀಜ್, ಮುಖಂಡರಾದ ಗೋವಿಂದರಾಜುಲು, ಮುನ್ನಾಬಾಯಿ, ಕೊಟ್ಟಾಲಪಲ್ಲಿ ಕ್ರಿಷ್ಣ(ಕಿಟ್ಟ), ಸಂತೋಷ, ಕೌಲ್‌ಬಜಾರ್ ಜಿಲಾನ್, ನಟರಾಜ, ವಿಘ್ನೇಶ್, ಜಗದೀಶ್ವರರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜೆಡಿಎಸ್ ಮುಖಂಡರು ಎಲ್ಲಾ ಮುಸ್ಲಿಂಬಾಂಧವರಿಗೆ ತಂಪಾದ ಬಾದಾಮಿ ಹಾಲು ಮತ್ತು ಶರಬತ್ತನ್ನು ವಿತರಿಸಿ, ಪರಸ್ಪರ ಹಬ್ಬದ ಶುಭಾಶಯಗಳನ್ನು ಹೇಳಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+