ರೆಡ್ಡಿ ಸೋದರರು ಸಂಪುಟಕ್ಕೆ ಇಲ್ಲ: ಡಿವಿಎಸ್ ಸ್ಪಷ್ಟನೆ
ರಾಯಚೂರು,
ಆಗಸ್ಟ್ 28: ಬಳ್ಳಾರಿಯ ರೆಡ್ಡಿ ಸೋದರರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಭಾನುವಾರ ಬೆಳಗ್ಗೆ ಸ್ಪಷ್ಟಪಡಿಸಿದ್ದಾರೆ. ಸುರಪುರದ ದೇವತ್ಕಲ್ ನಲ್ಲಿ ಸಾವಯವ ಕೃಷಿಕನ ಮನೆಗೆ ಭೇಟಿ ನೀಡಲು ಸದಾನಂದ ಗೌಡರು ರೈಲಿನಲ್ಲಿ ಇಲ್ಲಿಗೆ ಆಗಮಿಸಿದ್ದಾರೆ. id="toptextpromo">ಶೀಘ್ರವೇ
ಮೂರನೇ ಬಾರಿಗೆ ಸಂಪುಟವನ್ನು ವಿಸ್ತರಿಸುವುದಾಗಿ ಹೇಳಿದ ಡಿವಿಎಸ್, ಜನಾರ್ದನ ರೆಡ್ಡಿ ಸೋದರರು ಸದ್ಯಕ್ಕೆ ಕಾನೂನು ತೊಡಕಿನಲ್ಲಿ ಸಿಕ್ಕಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದರೊಂದಿಗೆ
ಶತಾಯಗತಾಯ ಅಧಿಕಾರ ಸಿದ್ಧಿಸಿಕೊಳ್ಳಬೇಕು ಎಂಬ ಹಪಾಹಪಿಯಲ್ಲಿದ್ದ ರೆಡ್ಡಿಗಳಿಗೆ ತೀವ್ರ ಹಿನ್ನಡೆಯಾಗಿದೆ. ಇದೇ ವೇಳೆ ಕಾನೂನು ಮೀರಿ ರೆಡ್ಡಿಗಳಿಗೆ ಸಂಪುಟದಲ್ಲಿ ಮಣೆ ಹಾಕಲಾಗುತ್ತದೆ ಎಂಬ ಊಹಾಪೋಹಕ್ಕೂ ಡಿವಿಎಸ್ ತೆರೆ ಎಳೆದಿದ್ದಾರೆ. ಕಾನೂನು ಹೋರಾಟದಲ್ಲಿ ರೆಡ್ಡಿಗಳು ಕಳಂಕವನ್ನು ದೂರಮಾಡಿಕೊಂಡು ಬಂದಾಗ, ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.











Click it and Unblock the Notifications