ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆಗಸ್ಟ್ ಕ್ರಾಂತಿ'ಯ ಜನ ಲೋಕಪಾಲಕ ಅಣ್ಣಾಗೆ ನೊಬೆಲ್ ಪ್ರಶಸ್ತಿ

By Srinath
|
Google Oneindia Kannada News

anna-hazare-should-get-nobel-peace-prize
ಹೊಸದಿಲ್ಲಿ, ಆಗಸ್ಟ್ 28: ಭ್ರಷ್ಟಾಚಾರ ವಿರುದ್ಧದ ಶಾಂತಿಯುತ ಹೋರಾಟ ನಡೆಸಿ, ಜಯದ ಹೊಸ್ತಿಲಲ್ಲಿರುವ 74 ವರ್ಷದ ಅಣ್ಣಾ ಹಜಾರೆ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂಬ ಒಕ್ಕೊರಲ ಬೇಡಿಕೆ ಎಲ್ಲೆಡೆ ಕೇಳಿಬರುತ್ತಿದೆ.

ಜನ ಲೋಕಪಾಲ ಮಸೂದೆ 12 ದಿನಗಳ ತೀವ್ರ ಹೋರಾಟದಲ್ಲಿ ಎಲ್ಲೂ ಶಾಂತಿ ಕದಡದೆ, ಇಡೀ ದೇಶದಲ್ಲಿ ಸಂಚಲವನ್ನುಂಡು ಮಾಡಿದ್ದಾರೆ. ವಿಶ್ವದ ಗಮನವನ್ನೂ ಭಾರತದತ್ತ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಅವರ ಹೆಸರನ್ನು ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಕೆಲವೇ ಕ್ಷಣಗಳ ಹಿಂದೆ ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ 13 ದಿನಗಳಿಂದ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ 74 ವರ್ಷದ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ. ಅಣ್ಣಾ ಉಪವಾಸ ನಿಲ್ಲಿಸುತ್ತಿದ್ದಂತೆ ಇಡೀ ದೇಶದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅಣ್ಣಾ ಉಪವಾಸದ ಅವಧಿ ಒಟ್ಟು 288 ಗಂಟೆಗಳು.

English summary
People across all walks of life are demanding that Anna Hazare who is fighting for jan lokpal bill should get Nobel Peace Prize.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X