ಅಣ್ಣಾ ಹಜಾರೆಗೆ ತಮಿಳು ನಟ ವಿಜಯ್ ಖಡಕ್ ಬೆಂಬಲ
ನವದೆಹಲಿ,
ಆಗಸ್ಟ್ 27: ರಾಮಲೀಲಾ ಮೈದಾನದಲ್ಲಿ ಗುರುವಾರ ಅಣ್ಣಾ ಹಜಾರೆಯವರನ್ನು ಭೇಟಿ ಮಾಡಿದ ಖ್ಯಾತ ತಮಿಳು ನಟ ವಿಜಯ್, ಜನ ಲೋಕಪಾಲ ಮಸೂದೆಗೆ ತಮ್ಮ ಭರಪೂರ ಬೆಂಬಲ ಸೂಚಿಸಿದರು. ಚೆನ್ನೈನಿಂದ ವಿಮಾನದ ಮೂಲಕ ನವದೆಹಲಿಗೆ ಬಂದ ವಿಜಯ್ ಅಣ್ಣಾ ಅವರನ್ನು ಭೇಟಿ ಮಾಡಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. id="toptextpromo">ಭ್ರಷ್ಟಾಚಾರ
ನಿರ್ಮೂಲನೆಗೆ ಅಣ್ಣಾ ಅವರ ಈ ಹೋರಾಟ ಸಹಕಾರಿಯಾಗಲಿದೆ. ಜನರು ಭ್ರಷ್ಟಾಚಾರದಿಂದ ಬೇಸತ್ತಿದ್ದು ಈ ಕಾರಣಕ್ಕಾಗಿ ಪಕ್ಷಭೇದ ಮೆರೆತು ಎಲ್ಲಾ ವರ್ಗದ ಜನರು ಅಣ್ಣಾ ಅವರ ಜೊತೆ ಕೈಜೋಡಿಸಿದ್ದಾರೆ ಎಂದರು. id='are-slot-1' class='oiad oi-axt oiadv'> id='top-searched-articles'>ಒಬ್ಬ
ತಮಿಳನಾಗಿ ನಾನು ಈ ಹೋರಾಟದಲ್ಲಿ ಭಾಗವಹಿಸಲು ಹೆಮ್ಮೆ ಪಡುತ್ತೇನೆ ಎಂದ ಅವರು ಅಣ್ಣಾ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ತಮಿಳುನಾಡಿನ ಖ್ಯಾತ ನಟಿ ರಜನೀಕಾಂತ್ ನಂತರ ಈಗ ವಿಜಯ್ ಸಹ ಅಣ್ಣಾ ಬೆಂಬಲಕ್ಕೆ ಬಂದಿದ್ದು ಈ ಮೂಲಕ ತಮಿಳು ಚಿತ್ರರಂಗದ ಇಬ್ಬರು ಖ್ಯಾತನಾಮರ ಬೆಂಬಲವೂ ಅಣ್ಣಾ ತಂಡಕ್ಕೆ ಸಿಕ್ಕಿದೆ.











Click it and Unblock the Notifications