• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರೋದು ಒಬ್ಳೆ ಹೆಂಡ್ತಿ : ಎಚ್ಡಿಕೆಗೆ ಹೆಗ್ಡೆ ಮಾತಿನ ಚಾಟಿ

By Prasad
|

ಬೆಂಗಳೂರು, ಆ. 27 : "ನನಗೆ 42 ವರ್ಷಗಳಿಂದ ಇರುವವಳು ಒಬ್ಬಳೇ ಹೆಂಡತಿ, ಒಂದೇ ಸಂಸಾರ. ನನಗಿರುವುದು ಒಂದೇ ಮನೆ. ನನಗೆ ರಾತ್ರಿ ಕೆಲಸ ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ. ನನಗೆ ಯಾವುದೇ ಕೆಟ್ಟ ಚಟಗಳೂ ಇಲ್ಲ. ಇಲ್ಲಿಯವರೆಗೆ 1 ರು. ಕೂಡ ಲಂಚ ಪಡೆದಿಲ್ಲ."

ಹೀಗೆ ಸಮಜಾಯಿಶಿ ನೀಡಬೇಕಾಗಿ ಬಂದಿದ್ದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರಿಗೆ. ಫ್ರೀಡಂ ಪಾರ್ಕಿನಲ್ಲಿ ಶನಿವಾರ ಭಾಷಣ ಮಾಡುತ್ತ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡಿದ ಆರೋಪಗಳಿಗೆ ಹೆಗ್ಡೆಯವರು ವ್ಯಂಗ್ಯಭರಿತ ಖಡಕ್ ಮಾತಿನ ಚಾಟಿ ಬೀಸಿದ್ದಾರೆ.

ಕುಮಾರಸ್ವಾಮಿಯವರು, "ಸಂತೋಷ್ ಹೆಗ್ಡೆಯವರು ತಮ್ಮ ರಾತ್ರಿ ಕೆಲಸಕ್ಕೆ ಎಷ್ಟು ಖರ್ಚು ಮಾಡುತ್ತಾರೆ. ಅದರ ಅಕೌಂಟೆಬಿಲಿಟಿ ಕೊಡ್ತಾರಾ? ಅಕ್ರಮ ಸಂಪಾದಿಸಿದ ಹಣವನ್ನು ರಾತ್ರಿ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದ್ದಾರಾ? ಈ ಬಗ್ಗೆ ಚರ್ಚೆ ಮಾಡಲು ಹೋದರೆ ಮನಸಿಗೆ ನೋವಾಗುತ್ತದೆ. ಅದಕ್ಕೇ ಚರ್ಚೆ ಮಾಡುವುದಿಲ್ಲ" ಎಂದು ಆರೋಪಿಸಿದ್ದಾರೆ.

ಚರ್ಚೆ ಮಾಡಿದರೆ ಮನಸಿಗೆ ನೋವಾಗುತ್ತದೆ ಎಂದು ಹೇಳಿಯೂ ಬಹಿರಂಗವಾಗಿ ಸಂತೋಷ್ ಹೆಗ್ಡೆಯವರನ್ನು ಚರ್ಚೆಗೆಳೆದಿರುವ ಕುಮಾರಸ್ವಾಮಿ ಅವರಿಗೆ ಫ್ರೀಡಂ ಪಾರ್ಕಿನಲ್ಲಿ ಸಹಸ್ರಾರು ಜನರ ಎದುರಿನಲ್ಲಿ ಕುಮಾರಸ್ವಾಮಿಯವರಿಗೆ ಹೆಗ್ಡೆಯವರು ತರಾಟೆಗೆ ತೆಗೆದುಕೊಂಡರು. ಹೆಗ್ಡೆಯವರು ರಾತ್ರಿ ಜೀವನದ ಬಗ್ಗೆ ಎಚ್ಡಿಕೆ ತಲೆಕೆಡಿಸಿಕೊಳ್ಳಬಾರದು, ಅವರು ಫ್ರೀಡಂ ಪಾರ್ಕಿನಿಂದ ನೇರವಾಗಿ ಮನೆಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು..

ಹೆಗ್ಡೆ ನಂತರ ಫಿಲ್ಮಿ ಸ್ಟೈಲಲ್ಲಿ ಮಾತಿನ ಮಳೆಸುರಿಗರೆದ ರಿಯಲ್ ಸ್ಟಾರ್ ನಟ ಉಪೇಂದ್ರ, ಅಭಿಮಾನಿಗಳಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿದರು. ಇಂದು ರಜೆಯಿರುವ ಕಾರಣ ಫ್ರೀಡಂ ಪಾರ್ಕಿನಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. [ಫ್ರೀಡಂ ಪಾರ್ಕ್ ಎಲ್ಲಿದೆ?]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
HD Kumaraswamy has alleged that former Lokayukta Santosh Hegde has been using money made from corruption for his late night activities. Santosh Hegde has given befitting answer to HDK by saying he has only wife, one house, one family and he never indulges in late night activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more