ಅಂತರಗಂಗೆಯಲ್ಲಿ ಮುಳುಗಿ ಪ್ರೇಮಿಗಳ ಆತ್ಮಹತ್ಯೆ

Lovers commit suicide
ಚಾಮರಾಜನಗರ, ಆ. 27 : ಒಬ್ಬರನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದ ಪ್ರೇಮಿಗಳು ಹೆತ್ತವರನ್ನು ವಿರೋಧಿಸಿ ಮದುವೆಯಾಗಲು ಧೈರ್ಯವಿಲ್ಲದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ನಡೆದಿದ್ದು, ಶನಿವಾರ ಪ್ರೇಮಿಗಳ ಮೃತದೇಹಗಳು ಪತ್ತೆಯಾಗಿವೆ.

ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳನ್ನು ಮಹದೇಶ್ವರ ಬೆಟ್ಟದ ನಿವಾಸಿ ಸೌಮ್ಯ ಹಾಗೂ ಕೊಳ್ಳೆಗಾಲ ತಾಲೂಕಿನ ಗುಂಡೇಗಾಲ ಗ್ರಾಮದ ನಂಜುಂಡಿ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಳೆದ ಕೆಲವು ಸಮಯಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಈ ವಿಷಯ ತಿಳಿಸಲು ಧೈರ್ಯವಿಲ್ಲದ ಸೌಮ್ಯ ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ಯಾರಿಗೂ ತಿಳಿಸದೆ ನಂಜುಂಡಿ ಬಳಿಗೆ ಬಂದಿದ್ದಳು.

ಮನೆಯಲ್ಲಿ ಸೌಮ್ಯ ಕಾಣದಿದ್ದಾಗ ಪೋಷಕರು ಎಲ್ಲಡೆ ಹುಡುಕಾಡಿ ಬಳಿಕ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಇತ್ತ ಇಬ್ಬರು ಪ್ರೇಮಿಗಳು ಒಂದೆಡೆ ಸೇರಿ, ಹೆತ್ತವರನ್ನು ವಿರೋಧಿಸಿ ಮದುವೆಯಾಗಲು ಧೈರ್ಯವಿಲ್ಲದೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಂತೆ ಇಬ್ಬರು ಅಂತರಗಂಗೆಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ಬೆಳಿಗ್ಗೆ ನದಿಯಲ್ಲಿ ತೇಲುತ್ತಿದ್ದ ಪ್ರೇಮಿಗಳಿಬ್ಬರ ಶವವನ್ನು ನೋಡಿದ ಸ್ಥಳಿಯರು ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ನದಿಯಿಂದ ಹೊರತೆಗೆದಾಗ ಪ್ರೇಮಿಗಳಿಬ್ಬರ ಗುರುತು ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+