ರಾಹುಲ್ ಗಾಂಧಿ ಬೇವಕೂಫ್ ಎಂದ ಟೀಂ ಅಣ್ಣಾ

Rahul Gandhi is fool, Team Anna
ನವದೆಹಲಿ ಆ.26: ಲೋಕಪಾಲ ಮಸೂದೆ ಒಂದರಿಂದ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ ಎಂದು ಸಂಸತ್ತಿನ ಶೂನ್ಯವೇಳೆಯಲ್ಲಿ ಮಾತನಾಡಿದ ರಾಹುಲ್ ಹೇಳಿಕೆ ಕೇಳಿ ಟೀಂ ಅಣ್ಣಾ ತಿರುಗಿಬಿದ್ದಿದೆ.

ರಾಹುಲ್ ಗಾಂಧಿ ಅತಿದೊಡ್ಡ ಬೇವಕೂಫ್ ಎಂದು ಜನ ಲೋಕಪಾಲ ಮಸೂದೆ ಕಡತ ರಚನೆಗಾರರಲ್ಲಿ ಒಬ್ಬರಾದ ಶಾಂತಿ ಭೂಷಣ್ ಹೇಳಿದ್ದಾರೆ. ಮಸೂದೆಯ ಪ್ರತಿಯನ್ನು ರಾಹುಲ್ ಗಾಂಧಿಯಿಂದ ಸರಿಯಾಗಿ ಓದಿ ನಂತರ ಹೇಳಿಕೆ ನೀಡಲಿ, ಬಾಯಿಗೆ ಬಂದಂತೆ ಬಡಬಡಾಯಿಸುವುದನ್ನು ನಿಲ್ಲಿಸಲಿ ಎಂದಿದ್ದಾರೆ.

ಲೋಕಪಾಲ್ ಸಮಿತಿ ಕೂಡಾ ಭ್ರಷ್ಟಾಚಾರಕ್ಕೆ ಈಡಾದರೆ ಏನು ಗತಿ ಎಂಬ ರಾಹುಲ್ ಶಂಕೆ ತೀರಾ ಬಾಲೀಶ ಹೇಳಿಕೆ ಎಂದು ಭೂಷಣ್ ಜರಿದಿದ್ದಾರೆ. ಆದರೆ, ಲೋಕಪಾಲ್ ಗೆ ಚುನಾವಣಾ ಆಯೋಗದಂತೆ ಸ್ಥಾನಮಾನ ನೀಡಬೇಕು ಎಂದು ರಾಹುಲ್ ಪ್ರಸ್ತಾಪಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದೊಮ್ಮೆ ಲೋಕಪಾಲರು ಭ್ರಷ್ಟರಾದರೆ, ದೇಶದ ಯಾವುದೇ ನಾಗರೀಕ ಅವರ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಬಹುದು. ಲೋಕಾಪಾಲ ಸದಸ್ಯರನ್ನು ಸಮಿತಿಯಿಂದ ಹೊರಹಾಕಬಹುದಾಗಿದೆ ಎಂದು ಭೂಷಣ್ ಹೇಳಿದ್ದಾರೆ. 1968 ರಲ್ಲಿ ಪ್ರಥಮ ಬಾರಿಗೆ ಜನ ಲೋಕಪಾಲ್ ಮಸೂದೆ ಕರಡು ಪ್ರತಿಯನ್ನು ಶಾಂತಿ ಭೂಷಣ್ ತಯಾರಿಸಿದವರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+