ಪ್ರೇಮಪಾಠಕ್ಕೆ ಒಲ್ಲೆ ಎಂದ ವಿದ್ಯಾರ್ಥಿನಿಯ ಕೈ ಕಟ್
ಅಗರ್ತಲಾ,
ಆಗಸ್ಟ್ 26: ತನ್ನ ಜತೆ ಪ್ರೇಮಪಾಠ ಮುಂದುವರಿಸು ಎಂದು ಪೀಡಿಸತೊಡಗಿದ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಒಲ್ಲೆ ಎಂದಾಗ ಅವಳ ಕೈ ಕತ್ತರಿಸಿದ್ದೂ ಅಲ್ಲದೆ ಆಕೆಯ ತಾಯಿಯ ಮೇಲೂ ಹಲ್ಲೆ ಮಾಡಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿರುವ 19 ವರ್ಷದ ಸುಷ್ಮಿತಾ ದಾಸ್ ಕೈ ಕತ್ತರಿಸಿದ ಶಿಕ್ಷಕ ಆಕೆಯ ಮತ್ತೊಂದು ಕೈ ಬೆರಳುಗಳನ್ನು ಕತ್ತರಿಸಿದ್ದಾನೆ. id="toptextpromo">ಇಲ್ಲಿನ
ಕಮಲಾಪುರದಲ್ಲಿ ಸುಷ್ಮಿತಾ ತಾಯಿಯೊಂದಿಗೆ ಮನೆಗೆ ವಾಪಸಾಗುತ್ತಿದ್ದಾಗ ಬುಧವಾರ ಸಂಜೆ ಈ ಘಟನೆ ನಡೆದಿದೆ. ಸುಷ್ಮಿತಾ ಮತ್ತು ಅವಳ ಗುರು ಸಂಜಯ್ ದಾಸ್ (40) ಮಧ್ಯೆ ವರ್ಷದಿಂದ ಪ್ರೇಮ ನುಸುಳಿತ್ತು. ಕಳೆದ ವರ್ಷ ಇಬ್ಬರೂ ನೆರೆಯ ಬಾಂಗ್ಲಾದೇಶಕ್ಕೂ ಪರಾರಿಯಾಗಿದ್ದರು. ಬಳಿಕ ಸೆಪ್ಟೆಂಬರಿನಲ್ಲಿ ಕಮಲಾಪುರಕ್ಕೆ ವಾಪಸೂ ಆಗಿದ್ದರು. id='are-slot-1' class='oiad oi-axt oiadv'> id='top-searched-articles'>ಅದೇನು
ಬುದ್ಧಿ ಬಂತೋ ಸುಷ್ಮಿತಾಗೆ ಸಂಜಯನ ಪ್ರೇಮವನ್ನು ನಿರಾಕರಿಸತೊಡಗಿದಳು. ಇದರಿಂದ ರೊಚ್ಚಿಗೆದ್ದ ಪಾಗಲ್ ಪ್ರೇಮಿ ಯಾನಿ ಆಕೆಯ ಶಿಕ್ಷಕ ಇಂತಹ ಕುಕೃತ್ಯಕ್ಕೆ ಕೈಹಾಕಿದ. ಸುಷ್ಮಿತಾ, ಆಕೆಯ ತಾಯಿ ರೀನಾ ದಾಸ್ ಇಬ್ಬರನ್ನೂ ಗೋವಿಂದ ವಲ್ಲಭ ಪಂತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಇಬ್ಬರ ಪರಿಸ್ಥಿತಿಯೂ ಗಂಭೀರವಾಗಿದೆ. ಆರೋಪಿ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸುಷ್ಮಿತಾ ಅಪ್ಪಾ ಸುಖೇಂದು ದಾಸ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.











Click it and Unblock the Notifications