ರಾಯರ ದರ್ಶನ ಮಾಡಿದ ಯಡ್ಡಿ 'ನಾನೇ ಮುಂದಿನ ಸಿಎಂ' ಅಂದ್ರು

ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಬುಧವಾರ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನಂತರ ಮಾತನಾಡುತ್ತಾ ಯಡಿಯೂರಪ್ಪ, 'ನಾನು ರಾಯರ ಭಕ್ತ. ರಾಯರು ನಂಬಿದವರನ್ನು ಕೈ ಬಿಡುವುದಿಲ್ಲ. ವರಿಷ್ಟರು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿ ರಾಜೀನಾಮೆ ನೀಡಿದ್ದೇನೆ.
ಗುರು ರಾಘವೇಂದ್ರ ದಯೆಯಿಂದ ನನ್ನ ಮೇಲಿರುವ ಆರೋಪದಿಂದ ಮುಕ್ತನಾಗಿ, ವಿರೋಧ ಪಕ್ಷದವರಿಗೆ ಸರಿಯಾದ ಪಾಠ ಕಲಿಸುತ್ತೇನೆ' ಎಂದು ವಿಶ್ವಾಸದ ದಾಟಿಯಲ್ಲಿ ಹೇಳಿದ್ದಾರೆ.
ಒಟ್ಟಿನಲ್ಲಿ ಅಧಿಕಾರ ಕಳಕೊಂಡ ನಂತರ ಯಡಿಯೂರಪ್ಪ ಆರು ತಿಂಗಳಲ್ಲಿ ನಾನೇ ಸಿಎಂ ಆಗ್ತೀನಿ, ನಾನೇ ಮುಂದಿನ ಸಿಎಂ ಇದರಲ್ಲಿ ಅನುಮಾನ ಬೇಡ ಎನ್ನುವ ಹೇಳಿಕೆ ನೀಡುತ್ತಾ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ತಮ್ಮ ಬಿಗಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಕೆಲಸವನ್ನು ಮುಂದುವರಿಸಿ ಸದಾನಂದರ ಆನಂದ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.











Click it and Unblock the Notifications