ರೆಡ್ಡಿಗಳಿಗೆ ಸಂಪುಟ ಬಾಗಿಲು ಬಂದ್: ಎಜಿ ಆಚಾರ್ಯ ಸಲಹೆ

ag-advices-to-halt-reddy-brothers-cabinet-berth
ಬಳ್ಳಾರಿ, ಆಗಸ್ಟ್ 24: ಲೋಕಾಯುಕ್ತ ಅಕ್ರಮ ಗಣಿಗಾರಿಗೆ ವರದಿಯಲ್ಲಿ ಬಳ್ಳಾರಿ ರೆಡ್ಡಿ ಸೋದರರ ಹೆಸರು ಕಾಣಿಸಿಕೊಂಡಿರುವುದರಿಂದ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಬೇಡವೆಂದು ಸರಕಾರಕ್ಕೆ ಅಡ್ವೊಕೇಟ್ ಜನರಲ್ (ಎಜಿ) ಬಿ.ವಿ. ಆಚಾರ್ಯ ಅವರು ಕಾನೂನು ಸಲಹೆ ನೀಡಿದ್ದಾರೆ. ಇದರೊಂದಿಗೆ ರೆಡ್ಡಿ ಸೋದರರಿಗೆ ಮತ್ತೆ ಸಚಿವರಾಗುವ ಭಾಗ್ಯ ತಪ್ಪಿದಂತಾಗಿದೆ.

ಗಣಿ ಅಕ್ರಮದಲ್ಲಿ ಭಾಗಿಯಾದವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಸರಕಾರ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ರೆಡ್ಡಿ ಬ್ರದರ್ಸ್ ಮತ್ತು ಅವರ ಆಪ್ತ ಬಂಟ ಶ್ರೀರಾಮುಲು ಸಚಿವರಾದ ಬಳಿಕ ಅಧಿಕಾರ ದುರುಪಯೋಗಪಡಿಸಿಕೊಂಡು ಗಣಿ ಅಕ್ರಮ ನಡೆಸಿದ್ದಾರೆ.

ಗಣಿ ಮಾಲೀಕರಿಂದ ಸೇ. 40ರಷ್ಟು ಪಾಲು ಪಡೆದಿರುವುದು ಮತ್ತು ರಫ್ತು ವಹಿವಾಟು ನಡೆಸಿರುವ ಆರೋಪ ಅವರ ಮೇಲಿದೆ. ಹೀಗಾಗಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದರೆ ಸರಕಾರದ ಅಸ್ತಿತ್ವಕ್ಕೆ ಅಪಾಯ ಎಂದು ಅಡ್ವೊಕೇಟ್ ಜನರಲ್ ಎಚ್ಚರಿಸಿದ್ದಾರೆ.

ಈ ಮಧ್ಯೆ ನೂತನ ಮುಖ್ಯಮಂತ್ರಿ ಸದಾನಂದ ಗೌಡರು ಅಡ್ವೊಕೇಟ್ ಜನರಲ್ ಅವರ ಸಲಹೆಯನ್ನು ಪಕ್ಷದ ವರಿಷ್ಠರ ಮುಂದಿಟ್ಟು ಅವರ ಮಾರ್ಗದರ್ಶನ ಕೋರಲಿದ್ದಾರೆ. ಅಂತಿಮವಾಗಿ ವರಿಷ್ಠರ ತೀರ್ಮಾನದ ಮೇಲೆ ರೆಡ್ಡಿ ಬ್ರದರ್ಸ್ ಸಂಪುಟ ಸೇರುವುದು ನಿರ್ಧಾರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+