ಆ.25ರಂದು ಸಂತ ಡಾನ್ ಬಾಸ್ಕೋ ಯಾತ್ರೆ ಶಿರ್ವಕ್ಕೆ

Our Lady of Health church, Shirva
ಉಡುಪಿ, ಆ. 24 : ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ದ ಶಿರ್ವ ಆರೋಗ್ಯ ಮಾತೆ ಚರ್ಚ್ ವಿಶ್ವ ಸಂಚಾರದಲ್ಲಿರುವ ಸಂತ ಡಾನ್‌ ಬಾಸ್ಕೊ ಅವರ ಬಲಗೈ ಇರುವ (ಪವಿತ್ರ ಕುರುಹು) ಮೇಣದ ದೇಹಾಕೃತಿಯ ಯಾತ್ರೆ ಸ್ವಾಗತಿಸಲು ಉತ್ಸುಕವಾಗಿದೆ. ಈ ಯಾತ್ರೆಯು ಆರೋಗ್ಯ ಮಾತೆ ಚರ್ಚ್‌ಗೆ ಆ. 25ರಂದು ಬೆಳಗ್ಗೆ 9 ಗಂಟೆಗೆ ಆಗಮಿಸಲಿದೆ ಎಂದು ಶಿರ್ವ ಆರೋಗ್ಯ ಮಾತಾ ಚರ್ಚ್‌ನ ಧರ್ಮಗುರು ರೆ| ಫಾ| ಸ್ಟ್ಯಾನಿ ತಾವ್ರೋ ತಿಳಿಸಿದ್ದಾರೆ.

ಸಂತ ಡಾನ್‌ ಬಾಸ್ಕೊ ಸ್ಥಾಪಿಸಿದ ಸಾಲೇಶಿಯನ್‌ ಸಭೆಯು ಶತಮಾನೋತ್ತರ ಚಿನ್ನದ ವರ್ಷ (150 ವರ್ಷ) ಪೂರೈಸಿದ ಅಂಗವಾಗಿ ಇಟಲಿಯಿಂದ 2009ರಲ್ಲಿ ಹೊರಟಿರುವ ಪವಿತ್ರ ಯಾತ್ರೆ ಏಪ್ರಿಲ್‌ ತಿಂಗಳಲ್ಲಿ ಭಾರತಕ್ಕೆ ಆಗಮಿಸಿದೆ. ವಿಶ್ವದ ಸುಮಾರು 129 ರಾಷ್ಟ್ರಗಳಲ್ಲಿ ಸಂಚರಿಸುವ ಈ ಯಾತ್ರೆಯು ಏಳು ವರ್ಷಗಳ ಬಳಿಕ (2015) ಇಟಲಿಗೆ ಮರಳಲಿದೆ. ಈ ಯಾತ್ರೆಯು ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಸಂಚರಿಸಿದ ಬಳಿಕ ಆ. 17ರಂದು ಕರ್ನಾಟಕಕ್ಕೆ ಆಗಮಿಸಿದ್ದು ಆ. 25ರಂದು ಶಿರ್ವಕ್ಕೆ ಆಗಮಿಸಲಿದೆ.

ಶಿರ್ವ ಚರ್ಚ್ ಕಾರ್ಯಕ್ರಮದ ನಂತರ ಈ ಯಾತ್ರೆ ಬೆಳ್ತಂಗಡಿ, ಕಾಸರಗೋಡು, ಹಾಸನ ಜಿಲ್ಲೆಗಳ ಸಹಿತವಾಗಿ ಕರ್ನಾಟಕದ ಹತ್ತು ಕಡೆಗಳಿಗೆ ತೆರಳಲಿದೆ. ಈ ಯಾತ್ರೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್‌ ಅಲೋಶಿಯಸ್‌ ಪಾವ್ಲ್ ಡಿ'ಸೋಜಾ ಅವರ ನೇತೃತ್ವದಲ್ಲಿ ಸ್ವಾಗತಿಸಲಾಗುವುದು. ಯಾತ್ರೆಯ ಬಳಿಕ ಯುವಕರಿಗಾಗಿ ಬಿಷಪ್‌ ದಿವ್ಯ ಬಲಿಪೂಜೆ ನೆರವೇರಿಸುವರು.

ಎಲ್ಲ ಭಕ್ತರಿಗೆ ಸಂಜೆ 4 ಗಂಟೆಗೆ ಧರ್ಮ ಪ್ರಾಂತ್ಯದ ಗುರು ವಂ| ಡೆನಿಸ್‌ ಮೊರಾಸ್‌ ಪ್ರಭು ಬಲಿಪೂಜೆ ಅರ್ಪಿಸಲಿದ್ದಾರೆ. ಮಧ್ಯಾಹ್ನ ಯುವಕರಿಗೆ ಹಾಗೂ ಪಾಲನಾ ಮಂಡಳಿಯ ಸದಸ್ಯರಿಗೆ ವಿಶೇಷ ಪ್ರವಚನ ನಡೆಯಲಿದೆ. ಸಂಜೆ 6 ಗಂಟೆಯವರೆಗೆ ನಡೆಯುವ ಈ ಐತಿಹಾಸಿಕ ಯಾತ್ರೆಯಲ್ಲಿ ಡಾನ್‌ ಬಾಸ್ಕೊ ಅವರ ಪವಿತ್ರ ಕುರುಹುವಿನ ದರ್ಶನಕ್ಕೆ ಮುಕ್ತ ಅವಕಾಶವಿದೆ ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+