ನಮ್ಮ ಮೆಟ್ರೋ ಗೌರಿ ಹಬ್ಬಕ್ಕಲ್ಲ ದೀಪಾವಳಿಗೆ ಓಡುತ್ತೇ!

ಇನ್ನು 20-25 ದಿನಗಳಲ್ಲಿ ಮೊದಲ ಸಂಚಾರ ನಡೆಸಲು ಬಿಎಂಆರ್ ಸಿಎಲ್ ಮೆಟ್ರೋ ಅಧಿಕಾರಿಗಳು ಸಜ್ಜಾಗಿದ್ದಾರೆ. ಆದರೆ, ರೈಲ್ವೇ ಸುರಕ್ಷತಾ ಮಂಡಳಿಯಿಂದ ಇನ್ನೂ ಮಂಜೂರಾತಿ ಸಿಕ್ಕಿಲ್ಲ. ಈ ಅನುಮತಿ ಸಿಗುವ ತನಕ ಕಾಯಲೇಬೇಕು.
ನಂತರ ಪ್ರಧಾನಿ ಕಚೇರಿಗೆ ವಿಷಯ ತಿಳಿಸಿ ಮನಮೋಹನ್ ಸಿಂಗ್ ಅವರ ಬಿಡುವಿನ ವೇಳೆಯನ್ನು ತಿಳಿದು ಇಲ್ಲಿ ಮಹೂರ್ತ ಫಿಕ್ಸ್ ಮಾಡಬೇಕು. ಒಂದು ವೇಳೆ ಪ್ರಧಾನಿ ಸಿಂಗ್ ಅವರೇ ಮೆಟ್ರೋ ಉದ್ಘಾಟಿಸಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿದರೆ ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ.
2011ರ ಜೂನ್ ತಿಂಗಳೊಳಗೆ ಮೆಟ್ರೊ ಕಾಮಗಾರಿ ಮುಗಿಸಬೇಕಾಗಿತ್ತು. ಈಗ 2013ರ ಡಿಸೆಂಬರ್‌ವರೆಗೆ ವಿಸ್ತರಣೆಗೊಂಡಿದೆ. ಜೊತೆಗೆ ಮೆಟ್ರೋ ಯೋಜನೆ ವೆಚ್ಚ 11,609 ಕೋಟಿ ರುಪಾಯಿಗಳಿಗೆ ಏರಿಕೆ ಕಂಡಿದೆ.
ಮೆಟ್ರೋ ರೈಲು ಓಡಾಟದ ಮಹೂರ್ತದ ಬಗ್ಗೆ ತಲೆಕೆಡಿಸಿಕೊಳ್ಳದೆ, ಎರಡನೇ ಹಂತದ ಕಾಮಗಾರಿ ಪರಿಶೀಲನೆಯಲ್ಲಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ ಬ್ಯುಸಿಯಾಗಿದ್ದಾರೆ












Click it and Unblock the Notifications