ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಏರಿಕೆ : ವಿದ್ಯುತ್ ನಂತರ ನೀರಿನ ಸರದಿ

By Mahesh
|
Google Oneindia Kannada News

BWSSB tariff hike likely
ಬೆಂಗಳೂರು, ಆ.24: ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಬೆಸ್ಕಾಂ ಸೂಚನೆ ನೀಡಿರುವ ಬೆನ್ನಲ್ಲೇ ನಗರದಲ್ಲಿ ನೀರಿನ ದರ ಏರಿಕೆ ಕೂಡ ಅನಿವಾರ್ಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಸಚಿವ ಎಸ್ ಸುರೇಶ್‌ಕುಮಾರ್ ಹೇಳಿದ್ದಾರೆ.

ಎರಡು ಬಾರಿ ವಿದ್ಯುತ್ ದರ ಏರಿಕೆಯಾಗಿರುವುದು ಜಲಮಂಡಳಿಗೆ ತೊಂದರೆಯಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ)ಗೆ ಜಲಮಂಡಳಿ ವಾರ್ಷಿಕ 350 ಕೋಟಿ ರೂಪಾಯಿಗಳಷ್ಟು ವಿದ್ಯುತ್ ಬಿಲ್ ಪಾವತಿಸುತ್ತಿದೆ ಎಂದು ಸಚಿವ ಸುರೇಶ್ ಹೇಳಿದರು.

ಜಲಮಂಡಳಿಯ ಆಡಳಿತ ಮಂಡಳಿ ನೀರಿನ ದರ ಏರಿಕೆ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಲಿದೆ.

ಎರಡು ಬಾರಿ ವಿದ್ಯುತ್ ದರ ಏರಿಕೆಯಾಗಿದ್ದರಿಂದ ವಿದ್ಯುತ್ ಬಿಲ್ ದರ ಶೇ 11ರಷ್ಟು ಏರಿಕೆಯಾಗಿದೆ. ಇದರಿಂದ ಜಲಮಂಡಳಿಗೆ ಹೆಚ್ಚಿನ ಹೊರೆ ಬೀಳುತ್ತಿದೆ.

ಪ್ರಸ್ತುತ ಜಲಮಂಡಳಿಯು ತೊರೆಕಾಡನಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯಿಂದ ಕಾವೇರಿ ನದಿ ನೀರನ್ನು ಪಂಪ್ ಮಾಡಿ ನಗರದ ಜನತೆಗೆ ಪೂರೈಕೆ ಮಾಡುತ್ತಿದೆ.

ನಗರಕ್ಕೆ ಸರಿಯಾಗಿ ನೀರು ಪೂರೈಸಲು ಪ್ರಮಾಣದ ವಿದ್ಯುತ್ ಬೇಕಾಗುತ್ತದೆ. ವಿದ್ಯುತ್ ದರ ಏರಿಕೆಯಾದರೆ, ನೀರಿನ ದರ ಏರಿಸುವುದು ಅನಿವಾರ್ಯ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ಹೇಳಿದರು.

English summary
First BESCOM hinted hike in power tariff, now water bill to cost more hints Minister Suresh Kumar.BWSSB likely to collect more money from consumers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X