ಪ್ರಧಾನಿ, ಹಜಾರೆಯೇ ತೀರ್ಮಾನಿಸಲಿ: ಎನ್ಆರ್ಎನ್ ವಿವೇಕದ ಮಾತು
ನವದೆಹಲಿ,
ಆಗಸ್ಟ್ 21: ಲೋಕಪಾಲ ಮಸೂದೆ ವಿಚಾರದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಅಣ್ಣಾ ಹಜಾರೆ ಅವರಿಬ್ಬರೂ ಒಂದು ತೀರ್ಮಾನಕ್ಕೆ ಬರಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅತ್ತ ನಂದನ್ ನಿಲೇಕಣಿ ಅಣ್ಣಾ ಹೋರಾಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ನಾರಾಯಣಮೂರ್ತಿ ಅವರು ಇಂತಹ ತೂಕದ ಮಾತನ್ನಾಡಿದ್ದಾರೆ. id="toptextpromo">ಅಸಾಧಾರಣ
ಸಾಮರ್ಥ್ಯದ ಮನಮೋಹನ ಸಿಂಗ್ ಹಾಗೂ ಹಜಾರೆ ಅವರು ಲೋಕಪಾಲ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬಂದು ಬಡತನ ಸಮಸ್ಯೆಯನ್ನು ಹೋಗಲಾಡಿಸುವ ದೇಶದ ಉತ್ಸಾಹ, ಆಶಾವಾದವನ್ನು ಹೆಚ್ಚಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜನ
ಲೋಕಪಾಲ ಮಸೂದೆ ಒಂದರಿಂದಲೇ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ. ಅಣ್ಣಾ ಅವರ ಹೋರಾಟ ದಡ್ಡತನದಿಂದ ಕೂಡಿದ್ದು ಎಂದು ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹೇಳಿದ ಬೆನ್ನಲ್ಲೇ ನಾರಾಯಣಮೂರ್ತಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.











Click it and Unblock the Notifications