ಮಲ್ಪೆ ಕಡಲ ತೀರದಲ್ಲಿ ಮಧ್ವಾಚಾರ್ಯರ ಪ್ರತಿಮೆ

ಉಡುಪಿಯಲ್ಲಿ ಧಾರ್ಮಿಕತೆ, ಸಾತ್ವಿಕತೆ ಬೇರೂರಲು ಮಧ್ವಾಚಾರ್ಯರು ನೀಡಿದ ಕೊಡುಗೆ ಅಪಾರ, 13ನೇ ಶತಮಾನದಲ್ಲಿ ಅವರು ನೀಡಿದ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹೇಳಿದರು.
ಮಧ್ವಾಚಾರ್ಯರು ಶ್ರೀ ಕೃಷ್ಣನನ್ನು ಎತ್ತಿಕೊಂಡಿರುವ 35 ಅಡಿ ಎತ್ತರದ ಕಲ್ಲಿನ ಪ್ರತಿಮೆ ಇಲ್ಲಿ ನಿರ್ಮಾಣವಾಗಲಿದೆ. ಪ್ರವಾಸಿಗರು, ಯಾತ್ರಾರ್ಥಿಗಳ ಆಕರ್ಷಣೆಗಾಗಿ ಈ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಕರ್ನಾಟಕ ಸರ್ಕಾರವು 2009ನೇ ಸಾಲಿನಲ್ಲಿ ಈ ಯೋಜನೆಗೆ 30ಲಕ್ಷ ಬಿಡುಗಡೆಮಾಡಿದೆ. ಜಿಲ್ಲಾಡಳಿತ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಿದೆ ಎಂದು ಉಡುಪಿ ನಗರ ಪಾಲಿಕೆ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ಹೇಳಿದರು.
ಒಮ್ಮೆ ವಡಬಂಡೇಶ್ವರ ಸಮೀಪದಲ್ಲಿ ಧ್ಯಾನನಿರತರಾಗಿದ್ದ ಮಧ್ವಾಚಾರ್ಯರಿಗೆ ದೂರದಲ್ಲಿ ಬರುತ್ತಿದ್ದ ಹಡಗು ಮುಳುಗುತ್ತಿರುವ ಮುನ್ಸೂಚನೆ ಸಿಕ್ಕಿತಂತೆ. ಆ ಹಡಗಿನಲ್ಲಿ ಶ್ರೀ ಕೃಷ್ಣ ಹಾಗೂ ಬಲರಾಮರ ಪ್ರತಿಮೆಗಳಿದ್ದವಂತೆ. ತಕ್ಷಣ ತಮ್ಮ ಯೋಗ ಪ್ರಭಾವದಿಂದ ಹಡಗು ಮುಳುಗದಂತೆ ತಡೆದು ಪವಾಡ ಮೆರೆದರು ಎಂದು ಸಿಎಂ ಕಥೆ ಹೇಳಿ ಎಂದಿನಂತೆ ನಗೆ ಬೀರಿದರು.












Click it and Unblock the Notifications