ಕಟ್ಟಾಗೆ ಶುರುವಾತು ಶನಿಕಾಟ: ಈ ಬಾರಿ ಇ.ಡಿ. ಉರುಳು

ಈ ಪ್ರಕರಣದಲ್ಲಿ ನಡೆದಿರುವ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧವೂ ಹಣದ ಅಕ್ರಮ ಚಲಾವಣೆ ತಡೆ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಇ.ಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಇದೀಗ ಜಾರಿ ನಿರ್ದೇಶನಾಲಯವೂ ಮೊಕದ್ದಮೆ ದಾಖಲಿಸಿರುವುದರಿಂದ ಕಟ್ಟಾ ಕುಟುಂಬ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಂಧನ ಸಾಧ್ಯತೆ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ನಾಯ್ಡು, ಜಗದೀಶ್ ಮತ್ತು ಶ್ರೀನಿವಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ. ಮೂವರಿಗೂ ಸೋಮವಾರ ಜಾಮೀನು ದೊರೆತರೂ ಇ.ಡಿ ತನಿಖಾ ತಂಡ ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ಹೈಕೋರ್ಟ್‌ನಿಂದ ಜಾಮೀನು ದೊರೆತರೂ ಇ.ಡಿ. ಮತ್ತೆ ಬಂಧಿಸಬಹುದು. ಇಲ್ಲವಾದರೆ, ನ್ಯಾಯಾಂಗ ಬಂಧನದಿಂದಲೇ ತಮ್ಮ ವಶಕ್ಕೆ ಪಡೆದು ಇಡಿ ತನಿಖಾ ತಂಡ ಈ ಅರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.
ವಿವಾದಿತ ಇಟಾಸ್ಕಾ ಕಂಪೆನಿಗೆ ಯುನೈಟೆಡ್ ಟೆಲಿಕಾಂ ಕಂಪೆನಿಯ ಮೂಲಕ ಭಾರಿ ಪ್ರಮಾಣದ ಹಣ ಸಂದಾಯ ಆಗಿರುವ ಅಂಶವೂ ತನಿಖೆಯ ವ್ಯಾಪ್ತಿಯಲ್ಲಿದೆ. ಇದರಿಂದಾಗಿ ಕೆಐಎಡಿಬಿ ಭೂ ಹಗರಣದ ಪ್ರಮುಖ ಆರೋಪಿಗಳೆಲ್ಲರೂ ಇಡಿ ತನಿಖೆಯ ಜಾಲಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರಿಯವಾಗಿದ್ದ ಕಟ್ಟಾ ಕುಟುಂಬ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಸಂಸ್ಥೆಗಳ ಮೇಲೂ ಜಾರಿ ನಿರ್ದೇಶನಾಲಯದ ತನಿಖಾ ತಂಡ ಈಗ ನಿಗಾ ವಹಿಸಿದೆ.












Click it and Unblock the Notifications