ಯಡ್ಡಿಗೆ ಜ್ಞಾನೋದಯ: ಲಂಚದ ವಿರುದ್ಧ ಬೀದಿಗಿಳಿದು ಪ್ರಯೋಜನವಿಲ್ಲ

bs-yeddyurappa-flays-anna-fast-protest
ಬೆಂಗಳೂರು, ಆಗಸ್ಟ್ 20: ಇದೇನು ಅರುಳು ಮರುಳೊ ಅಥವಾ ತಡವಾಗಿ ಜ್ಞಾನೋದಯ ಆಗಿರುವುದೋ ಅಥವಾ ಯಾವುದೇ ಹೋರಾಟಗಳು ನಮ್ಮಂಥ ಭ್ರಷ್ಟರ ವಿರುದ್ಧ ಯಶಸ್ವಿಯಾಗದು ಎಂಬ ಅನುಭವಾಮೃತವೋ... ಅಂತೂ ಈ ಯಡಿಯೂರಪ್ಪ ಎಂಬ ಮಾಜಿ ಮುಖ್ಯಮಂತ್ರಿ ಹೊಸ ವರಸೆ ಶುರುವಿಟ್ಟುಕೊಂಡಿದ್ದಾರೆ. ಅದಕ್ಕೇ ತಾಕತ್ತಿದ್ದರೆ ಸಂಸತ್ತಿನಲ್ಲಿ ಬಲಿಷ್ಠ ಕಾನೂನು ತಂದು ನಮ್ಮಂಥವರನ್ನು ಬಲಿ ಹಾಕಿ ಎಂದು ಪರೋಕ್ಷವಾಗಿ ಸವಾಲು ಹಾಕಿದ್ದಾರೆ.

ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟ ಯಶಸ್ವಿಯಾಗಲು ಬೀದಿಗಿಳಿದರೆ ಪ್ರಯೋಜನವಿಲ್ಲ ಎಂದು 'ಅಣ್ಣ' ಯಡಿಯೂರಪ್ಪ ಶುಕ್ರವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಜನ ಲೋಕಪಾಲ ಮಸೂದೆ ಬಗ್ಗೆ ಚರ್ಚೆ ನಡೆಸಿ ಒಮ್ಮತದ ನಿರ್ಣಯ ಕೈಗೊಂಡರೆ ಮಾತ್ರ ಸಮಸ್ಯೆ ಬಗೆಹರಿಯಬಹುದು.

ಸಂಸತ್ತಿನಲ್ಲಿ ಮಾತ್ರ ಇದಕ್ಕೆ ಉತ್ತರ ದೊರೆಯಲು ಸಾಧ್ಯವೆಂದು ಅಣ್ಣ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. ಕೇವಲ ಉಪವಾಸ ಸತ್ಯಾಗ್ರಹ ಮಾಡಿದರೆ ಹಜಾರೆಯವರ ಆರೋಗ್ಯ ಕೆಡುತ್ತದೆ ಎಂದೂ ಯಡಿಯೂರಪ್ಪ ಅಣ್ಣಾ ಬಗ್ಗೆ ಸಾಂತ್ವನದ ಮಾತುಗಳನ್ನು ಆಡಿದ್ದಾರೆ.

ಅಣ್ಣ ಯಡ್ಡಿಯ ಈ ಹೊಸ ವರಸೆ ಬಿಜೆಪಿ ವರಿಷ್ಠರನ್ನು ಇರುಸುಮುರುಸಿಗೆ ಸಿಲುಕಿಸಿದೆ. ಇವಯ್ಯ ಮೊನ್ನೆಯಷ್ಟೇ ಅಣ್ಣಾಗೆ ಬೆಂಬಲ ಸೂಚಿಸಿ, ಗಾಂಧಿ ಪ್ರತಿಮೆ ಎದುರು ಧರಣಿ ನಡೆಸ್ತೀನಿ ಎಂದಿದ್ದ. ಈ ಮಧ್ಯೆ, 'ಛುಪ್' ಎಂದು ಗದರಿಕೊಂಡಿದ್ದಕ್ಕೆ ಸುಮ್ಮನಾಗಿದ್ದ ಇವಯ್ಯ ಇದೇನಿದು ಅಣ್ಣಾ ವಿಷಯದಲ್ಲಿ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದಾನೆ ಎಂದು ವರಿಷ್ಠರು ತಲೆ ಚಚ್ಚಿಕೊಳ್ಳುತ್ತಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+