ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಧರ್ಮಸ್ಥಳಕ್ಕೆ ಭೇಟಿ

ಆದರೆ ಅವರ ನಾಳಿನ ಭೇಟಿಗೆ ವಿಶೇಷ ಅರ್ಥವೇನೂ ಇಲ್ಲ. ಆದರೆ ಇದು ಕುಮಾರಸ್ವಾಮಿಯೊಂದಿಗಿನ ಆಣೆ-ಪ್ರಮಾಣ ಜಗಳದ ನಂತರ ಅವರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾ ಸಲ. ಹಾಗಾಗಿ ಇಡೀ ರಾಜ್ಯದ ಜನತೆ ಕಣ್ಣು, ಬಾಯಿ ಬಿಟ್ಟುಕೊಂಡು ಯಡಿಯೂರಪ್ಪ ಹಾಗೂ ಧರ್ಮಸ್ಥಳ ಎರಡನ್ನೂ ನಾಳೆ ಗಮನಿಸಲಿರುವುದು ಗ್ಯಾರಂಟಿ.
ರಾಜಕಾರಣಿಗಳು ಭಕ್ತರಾಗಿ ಹೋದರೂ ಈಗ ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಅದರಲ್ಲೂ ಈಗ ಮಾಜಿ ಸಿಎಂ ಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಹೋಗುತ್ತಾರೆಂದರೆ ಖುದ್ದು ಮಂಜುನಾಥಸ್ವಾಮಿಗೆ ಕುತೂಹಲ ಕೆರಳಿದರೆ ಆಶ್ಚರ್ಯವಿಲ್ಲ. ಮೂಲಗಳ ಪ್ರಕಾರ ಅವರ ನಾಳೆಯ ಭೇಟಿಯ ಹಿಂದೆ ಒಂದಿಷ್ಟು ಧಾರ್ಮಿಕ ಭಯ ಇರಬಹುದು ಅಂತಾರೆ.
ಅವರ ನಾಳಿನ ಈ ಬೇಟಿ ಯಾಕಾಗಿ ಎಂಬುದು ಇಂದು ಅಪ್ರಸ್ತುತ. ಏಕೆಂದರೆ ಯಡಿಯೂರಪ್ಪ "ಹೇಳುವುದು ಒಂದು, ಮಾಡುವುದು ಇನ್ನೊಂದು..." ಎಂಬ ಗಾದೆ ಸದ್ಯಕ್ಕೆ ಚಾಲ್ತಿಯಲ್ಲಿದೆ. ರಾಜ್ಯಕ್ಕೆ ಶುಭವಾಗಲಿ ಎಂದು ಪ್ರಾರ್ಥಿಸುತ್ತಾರೋ.. ಅಥವಾ ಆದಷ್ಟು ಬೇಗ ಸಿಎಂ ಪಟ್ಟ ಮತ್ತೆ ಸಿಗಲಿ ಎಂದು ಬೇಡಿಕೊಳ್ಳುತ್ತಾರೋ..












Click it and Unblock the Notifications