ಕುಮಾರಸ್ವಾಮಿ ಯಾಕೆ ಮೌನವಾಗಿದ್ದಾರೆ ಗೊತ್ತೆ?

ಲೋಕಯುಕ್ತಕ್ಕೆ ಹೆದರಿಲ್ಲ: ಲೋಕಯುಕ್ತರು ನೀಡಿದ ವರದಿಯಲ್ಲಿ ತಮ್ಮ ಹೆಸರಿರುವುದು ಮೌನಕ್ಕೆ ಕಾರಣವಲ್ಲ ಎಂದು ಅವರು ಹೇಳಿದ್ದಾರೆ. ಲೋಕಯುಕ್ತರು ನೀಡಿದ ವರದಿಯಲ್ಲಿ ಎರಡು ಪ್ರಕರಣಗಳಲ್ಲಿ ನಾನು ತೆಗೆದುಕೊಂಡಿರುವ ತೀರ್ಮಾನಗಳನ್ನು ಪ್ರಕಟಿಸಲಾಗಿದೆ. ಆದರೆ ಇದರಲ್ಲಿ ನನ್ನ ಸಾಚಾತನವನ್ನು ಸೂಕ್ತ ದಾಖಲೆಯೊಂದಿಗೆ 2 ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಕಾದು ನೋಡುವ ತಂತ್ರ: ಯಡಿಯೂರಪ್ಪ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದ ಕುಮಾರಸ್ವಾಮಿ ಸದಾನಂದ ಗೌಡ ಮುಖ್ಯಮಂತ್ರಿಯಾದ ಕೂಡಲೇ ಮೌನಕ್ಕೆ ಶರಣಾದೇಕೆ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ..
ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದಾರೆ. ಈಗಲೇ ಅವರ ನಡೆಯನ್ನು ನಿರ್ಧರಿಸುವುದು ಒಳ್ಳೆಯದಲ್ಲ. ಸ್ವಲ್ಪ ದಿನ ಆಡಳಿತ ನಡೆಸಲಿ. ಆಮೇಲೆ ಅವರ ತಪ್ಪುಗಳನ್ನು ಮಾಡಿದರೆ ಜನತೆಯ ಮುಂದೆ ತೆರೆದಿಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications