ಚಾ.ನಗರ ಶಾಪ ವಿಮೋಚನೆ ಮಾಡಲು ಸಿಎಂಗೆ ಸವಾಲ್

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಕುಂಠಿತವಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ್ದರೆ ಅಧಿಕಾರ ಕಳೆದು ಕೊಳ್ಳುತ್ತಿರಲಿಲ್ಲ.
ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿ ನೀಡದೆ ಇರುವುದನ್ನು ಪ್ರಶ್ನಿಸಿ ಸದ್ಯದಲ್ಲೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ ಎಂದು ವಾಟಾಳ್ ಹೇಳಿದ್ದಾರೆ.
ಮೂಢನಂಬಿಕೆ ತೊಲಗಿಸಿ: ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎನ್ನುವ ಮೂಢನಂಬಿಕೆಗೆ ಜೋತು ಬಿದ್ದ ಯಡಿಯೂರಪ್ಪ ಅವರು ಜಿಲ್ಲೆಗೆ ಭೇಟಿ ನೀಡದಿದ್ದರೂ ಅಧಿಕಾರ ಕಳೆದುಕೊಂಡ ನಿದರ್ಶನ ಕಣ್ಣ ಮುಂದಿದೆ. ಇದರಿಂದ ಎಲ್ಲರೂ ಪಾಠ ಕಲಿಯಲಿ.
ಸದಾನಂದ ಗೌಡರು ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸ ಮುಗಿಸಿದ ತಕ್ಷಣ ಚಾಮರಾಜ ನಗರ ಜಿಲ್ಲೆಗೆ ಬಂದು ಜನತಾ ದರ್ಶನ ಕಾರ್ಯಕ್ರಮ ನಡೆಸಲಿ. ಗಡಿ ಪ್ರದೇಶದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ ಎಂದು ವಾಟಾಳ್ ಆಗ್ರಹಿಸಿದರು.












Click it and Unblock the Notifications