ಮತ್ತೆ ಬಲೆಯೇರಿಸುತ್ತಿರುವ ಮಂಗಳೂರು ಮೀನುಗಾರರು

Fishing activity begins near Mangalore
ಮಂಗಳೂರು. ಆ. 11 : ಮಳೆಗಾಲ ತುಸು ವಿರಾಮ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಮೀನುಗಾರಿಕೆಗೆ ಭರದ ಸಿದ್ದತೆಗಳು ನಡೆದಿವೆ. ಮಳೆಗಾಲದಲ್ಲಿ ಸಮುದ್ರದ ದಂಡೆ ಸೇರಿದ್ದ ಮೀನುಗಾರಿಕೆ ದೋಣಿಗಳು ಇದೀಗ ನೀರಿಗಿಳಿಯಲು ಸಜ್ಜಾಗಿವೆ.

ವಿರಾಮದ ಅವಧಿಯಲ್ಲಿ ಸಾಮಾನ್ಯವಾಗಿ ದೋಣಿಗಳ ದುರಸ್ತಿ, ಮೀನು ಹಿಡಿಯುವ ಬಲೆಗಳ ರಿಪೇರಿ ಮಾಡಲಾಗುತ್ತದೆ. ಮಳೆಗಾಲದಲ್ಲ್ಲಿಸಮುದ್ರಕ್ಕಿಳಿಯದಂತೆ ಸರ್ಕಾರ ಮೀನುಗಾರರಿಗೆ ಕಟ್ಟಪ್ಪಣೆ ಹೊರಡಿಸಿದ ಕಾರಣ ಸಂಭವನೀಯ ಅವಘಡಗಳು ತಪ್ಪಿವೆ.

ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗುವ ದೋಣಿಗಳು, ಪರ್ಸೀನ್ ಬೋಟುಗಳು ಬಹುತೇಕ ಗುರುವಾರ ಸಮುದ್ರಕ್ಕಿಳಿಯಬಹುದು. ಆಗಸ್ಟ್ 15ರಂದು ಸಮುದ್ರಪೂಜೆ ಮಾಡಿದ ಮೇಲೆಯೇ ಮೀನುಗಾರಿಕೆಗೆ ತೊಡಗುವವರೂ ಇದ್ದಾರೆ.

ಮಳೆಗಾಲದಲ್ಲಿ ನಾಡದೋಣಿಗಳು ಸಮುದ್ರ ತೀರದಲ್ಲಿ ಮೀನುಗಾರಿಕೆ ಮಾಡಿ ನವಮಂಗಳೂರು ಬಂದರು ಮೂಲಕ ದಡ ಸೇರುತ್ತಿದ್ದವು. ದಕ್ಷಿಣ ಕನ್ನಡ ಕರಾವಳಿಯಲ್ಲಿ ಅದರಲ್ಲೂ ಪಣಂಬೂರು-ಕುಳಾಯಿಯಲ್ಲಿ ಸರ್ವ ಋತು ಮೀನುಗಾರಿಕೆ ಬಂದರು ನಿರ್ಮಿಸುವಂತೆ ಅನೇಕ ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ.

ಇದೀಗ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸರ್ವಋತು ಬಂದರು ನಿರ್ಮಿಸಲು ನೆರವಾಗುತ್ತಾರೆ ಎನ್ನುವುದು ಸ್ಥಳೀಯ ಮೀಂಗುಲಿಗರ ನಿರೀಕ್ಷೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+