ಇಂದೇ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಸ್ತು: ಈಶ್ವರಪ್ಪ
ನವದೆಹಲಿ,
ಆಗಸ್ಟ್ 11: ರಾಜ್ಯದಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಸ್ತು ಎಂದಿದೆ. ಇಂದು ಸಂಜೆ 5 ಗಂಟೆಗೆ 5ಶಾಸಕರು ಸಚಿವರಾಗಿ ರಾಜಭವನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ದೆಹಲಿಯಲ್ಲಿ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ ಈ ಐದೂ ಶಾಸಕರು ಯಾರು ಎಂಬುದನ್ನು ಈಶ್ವರಪ್ಪ ಬಹಿರಂಗಪಡಿಸಿಲ್ಲ. id="toptextpromo">ಪಕ್ಷದ
ವರಿಷ್ಠರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಸೂಚನೆ ಮೇರೆಗೆ ಇಂದು ಬೆಳಗ್ಗೆ ದೆಹಲಿಗೆ ತೆರಳಿ ಮಾತುಕತೆ ನಡೆಸಿದ ಮುಖ್ಯಮಂತ್ರಿ ಡಿವಿಎಸ್ ಮತ್ತು ಈಶ್ವರಪ್ಪ ಈ ವಿಷಯ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಬಣದಿಂದ ಮೂವರು, ಶೆಟ್ಟರ್ ಪಾಳಯದಿಂದ 2 ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಸೋಮಶೇಖರ ರೆಡ್ಡಿಗೂ ಸಚಿವ ಸ್ಥಾನ ಖಚಿತ ಎನ್ನಲಾಗಿದೆ. ಇದರಿಂದ ಶುಕ್ರವಾರದ ವರಮಹಾಲಕ್ಷ್ಮಿ ಮುನ್ನಾ ಸಂದರ್ಭದಲ್ಲಿ ಭಾರಿ ಸಂಭ್ರಮ ರಾಜ್ಯದಲ್ಲಿ ಅಲ್ಲಲ್ಲ ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಅದರಲ್ಲೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿರುವ ಬಳ್ಳಾರಿ ರೆಡ್ಡಿ ಧಣಿಗಳಲ್ಲಿ ಕಾಣಿಸಿಕೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.











Click it and Unblock the Notifications