ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳಿಗೆ ಯಡಿಯೂರಪ್ಪ ಸೂಪರ್ ಸಿಎಂ!

ಯಡಿಯೂರಪ್ಪ ಸಹ ಅಧಿಕಾರಶಾಹಿಯ ತಾಳಕ್ಕೆ ತಲೆದೂಗಿದರು. ಸುದ್ದಿಗೋಷ್ಠಿಯಲ್ಲಿ ತಾವಿನ್ನೂ ಮುಖ್ಯಮಂತ್ರಿ ಎನ್ನುವ ಗುಂಗಿನಲ್ಲೇ ಮಾತಾಡಿದರು. ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದರು. 'ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳಬಾರದು; ಅನುದಾನದ ಪ್ರಶ್ನೆ ನನಗೆ ಬಿಡಿ' ಎಂದು ಭರವಸೆ ನೀಡಿದರು.
ನಂತರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ದಿನಚರಿಗಳನ್ನೂ ಅವರೇ ಹೇಳಿ ಅಚ್ಚರಿ ಹುಟ್ಟಿಸಿದರು. 'ಇನ್ನೆರಡು ದಿವಸದಲ್ಲಿ ಗೌಡರು ನವದೆಹಲಿಯಿಂದ ಬರುತ್ತಾರೆ. ಬಂದ ತಕ್ಷಣ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಈ ನಡುವೆ ತುಂಬಿದ ಕೆಆರ್ಎಸ್‌ಗೆ ಬಾಗಿನ ಅರ್ಪಿಸುತ್ತಾರೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳು ತುಂಬುತ್ತಿವೆ. ರೈತ ತೃಪ್ತಿಯಿಂದ ಇದ್ದಾನೆ' ಎಂದು ಮಾತು ಮುಗಿಸಿದರು.
ಸುದ್ದಿಗೋಷ್ಠಿಯ ನಂತರ ಅವರು, ಸಚಿವ ಮುರುಗೇಶ್ ನಿರಾಣಿ ಕೊಡುಗೆ ನೀಡಿದ ಬೆಂಜ್ ಕಾರು ಹತ್ತಿ ಹೊರಟಿದ್ದು ಈಗ ವಿವಾದದ ಕೇಂದ್ರವಾದ ಪ್ರೇರಣಾ ಟ್ರಸ್ಟ್ ಒಡೆತನದ ಪಿಇಎಸ್ ಎಂಜಿನಿಯರ್ ಕಾಲೇಜಿಗೆ !












Click it and Unblock the Notifications